ರಾಷ್ಟ್ರಪತಿ ಆಯ್ಕೆಗೆ ವೇದಿಕೆ ಸಜ್ಜು
ನವದೆಹಲಿ: ಸ್ವತಂತ್ರ ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ವೇದಿಕೆ ಸಜ್ಜಾಗಿದೆ. ಸೋಮವಾರ ಜು.೧೭ ರಾಷ್ಟ್ರಪತಿ ಎಲೆಕ್ಷನ್
ನಡೆಯಲಿದ್ದು, ಸಂಸತ್ ಭವನ ದೇಶದ 28 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭೆ ಕಟ್ಟಡಗಳೇ ಮತದಾನ ಕೇಂದ್ರಗಳಾಗಿವೆ, ಇಲ್ಲಿ ಶಾಸಕರು ಸಂಸದರು ಸೇರಿದಂತೆ ಒಟ್ಟು 4,896 ಮಂದಿ ಹಕ್ಕು ಚಲಾಯಿಸಲಿದ್ದು, ರಾಷ್ಟ್ರಪತಿ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾಮ್ಸ್ ಮತ್ತು ನ್ಯಾಶನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಮತದಾರರ ಕುರಿತು ಆಳವಾದ ಅಧ್ಯನ ನಡೆಸಿವೆ. ಅಧ್ಯಯನದಿಂದ ದೊರೆತ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದನ್ನು ಕ್ರಿಮಿನಲ್ ಗಳು ಹಾಗೂ ಕೋಟ್ಯಾಧಿಪತಿಗಳು ನಿರ್ಧರಿಸುತ್ತಾರೆ. ಹೌದು, ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲಿರುವ ದೇಶದ ೪,೮೯೬ ಶಾಸಕರು, ಸಂಸದರ ಪೈಕಿ ಶೇ33ರಷ್ಟು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಶೇ. 71 ಜನಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರ ದಿಂದ ಈ ಎಲ್ಲಾ ಮಾಹಿತಿ ಲಭ್ಯವಾಗಲಿವೆ.
Comments