ಸಂಸತ್ ಮುಂಗಾರು ಅಧಿವೇಶನ, ವಿಪಕ್ಷಗಳಿಗೆ ಕಣಿವೆ ರಾಜ್ಯ ಅಸ್ತ್ರ
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಕಾಶ್ಮೀರದಲ್ಲಿನ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ ಕುರಿತು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಕಾಶ್ಮೀರದಲ್ಲಿ ಪರಿಸ್ಥಿತಿ ಕುರಿತು ಪ್ರತಿ ಪಕ್ಷಗಳಿಗೆ ಮನವರಿಕೆ ಮಾಡಿಕೊಡಲು ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ಕರೆದ ಸರ್ವಪಕ್ಷ ಸಭೆಯಲ್ಲೂ ಈ ವಿಚಾರ ಕಾವೇರಿದೆ.
ಅಮರನಾಥ್ ಯಾತ್ರಿಗಳ ಮೇಲೆ ದಾಳಿ ನಡೆದ ನಂತರ ಕಣಿವೆ ರಾಜ್ಯದಲ್ಲಾಗಿರುವ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಪಕ್ಷಗಳ ತಂತ್ರ, ಬಿಎಸ್ ಪಿ, ತೃಣ ಮೂಲ ಕಾಂಗ್ರೆಸ್, ಶಿವಸೇನೆ ಸನ್ನದ್ಧವಾಗಿದೆ. ಇನ್ನು ಸಿಕ್ಕಿಂ ವಲಯದ ಭಾರತ-ಚೀನಾ ಗಡಿಯಲ್ಲಿ ನೆರೆ ರಾಷ್ಟ್ರದ ಕ್ಯಾತೆ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸಂಸತ್ತಿನ ಅಧಿವೇಶನದಲ್ಲೂ ಬಿಸಿ ಚರ್ಚೆಗೆ ಕಾರಣವಾಗಲಿದೆ.
Comments