2019ರ ಲೋಕಸಭಾ ಚುನಾವಣೆಗೆ ಸೋನಿಯಾ ಗಾಂಧಿ ನೇತೃತ್ವ

ನವದೆಹಲಿ: ಜು. 2019 ರ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಭರ್ಜರಿ ತಯಾರಿ ನಡೆಸಿರುವಾಗಲೇ, ಪ್ರಮುಖ ವಿಪಕ್ಷ ತನ್ನ ನಿರ್ಧಾರ ಬದಲಿಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ರಾಹುಲ್ ನೇತೃತ್ವ ಬದಲಾಗಿ, ಸೋನಿಯಾ ಗಾಂಧಿ ನೇತೃತ್ವದಲ್ಲೇ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. 2014ರ ಚುನಾವಣೆಗೂ 2019ರ ಚುನಾವಣೆಗೂ ಸಾಕಷ್ಟು ಭಿನ್ನತೆ, ಇತ್ತೀಚೆಗೆ ಮುಕ್ತಾಯಗೊಂಡ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೆಚ್ಚುತ್ತಿರುವ ಮೋದಿ ವರ್ಚಸ್ಸು, ರಾಜಕೀಯ ಚಾಣಾಕ್ಷತನವನ್ನು ಇನ್ನು ಪಕ್ವತೆ ತೋರದ ರಾಹುಲ್, ಇವೆಲ್ಲವನ್ನು ಯೋಚಿಸಿ ಸ್ವತಃ ಅಖಾಡಕ್ಕೆ ಸೋನಿಯಾ ಗಾಂಧಿ ಇಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
Comments