ರಾಹುಲ್ ಟೀಕೆ,, ಸ್ಮೃತಿ ಇರಾನಿ ರಿಯಾಕ್ಷನ್ !!
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಾಸಗಿ ಮಾಧ್ಯಮದಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ದಾಳಿ ನಡೆಸುವ ಬದಲು, ಭಯೋತ್ಪಾದನೆ ಮೇಲೆ ದಾಳಿ ನಡೆಸಲಿ ಎಂದು ಖಾರವಾಗಿ ನುಡಿದಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನಾಯಕತ್ವ ಇಲ್ಲ ಎಂಬುದು ದೇಶದ ಜನರಿಗೆ ಗೊತ್ತಿದೆ. ಅವರ ಮಾತಿನಿಂದ ತಿಳಿದು ಬರುವುದೆನೆಂದರೆ, ರಾಹುಲ್ ಗೆ ದೇಶಕ್ಕಿಂತ, ರಾಜನೀತಿಯೇ ಮುಖ್ಯ ಎಂದು ಸ್ಮೃತಿ ಇರಾನಿ ಆರೋಪ ಮಾಡಿದರು.
ಅಮರನಾಥ್ ಯಾತ್ರಿಕರ ಮೇಲೆ ಭಯೋತ್ಪಾಕರು ನಡೆಸಿದ ದಾಳಿ ಕುರಿತು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ ವ್ಯಕ್ತಪಡಿಸಿದ್ದರು. ಭಯೋತ್ಪಾದನಾ ದಾಳಿಯನ್ನು ಖಂಡಿಸಿದ್ದರು. ಪ್ರಧಾನಿ ಮೋದಿ ಅಮರನಾಥ್ ಯಾತ್ರಿಕರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ್ದ್ದರು.
Comments