ಮದುವೆ ಹೇಳಿಕೆ- ಶೋಭಾ ಹೇಳಿಕೆಗೆ ದಿನೇಶ್ ಗುಂಡುರಾವ್ ತಿರುಗೇಟು

ಬೆಂಗಳೂರು: ಮದುವೆ ಹೇಳಿಕೆ ಸಂಬಂಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹಾಗೂ ದಿನೇಶ್ ಗುಂಡು ರಾವ್ ಆರೋಪ- ಪ್ರತ್ಯಾರೋಪ ಮುಂದುವರಿಸಿದ್ದಾರೆ. ದಲಿತರ ಮನೆಗೆ ಊಟ ಮಾಡಿದರೇ ಸಾಲದು ದಲಿತ ಯುವತಿಯನ್ನು ತಮ್ಮ ಕುಟುಂಬದ ಸದಸ್ಯರಿಗೆ ವಿವಾಹ ಮಾಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಕಾರ್ಯಾಗಾರಿ ಅಧ್ಯಕ್ಷ ಪತ್ನಿ ದಲಿತರೇ? ಕಾಂಗ್ರೆಸ್ ಕಾರ್ಯಾಧ
ಈ ಕುರಿತು ತಿರುಗೇಟು ನೀಡಿರುವ ದಿನೇಶ್ ಗುಂಡುರಾವ್ ನಾನು ಯಾರನ್ನು ಮದುವೆಯಾಗಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು.
ಅದರಿಂದ ಸಮಾಜಕ್ಕೆ ಯಾವುದೇ ತಪ್ಪು ಸಂದೇಶ ಹೋಗಿಲ್ಲ. ಒಂದು ವೇಳೆ ನಾನು ದಲಿತ ಯುವತಿಯನ್ನು ಇಷ್ಟಪಟ್ಟಿದ್ದರೆ
ದಲಿತಲ ಯುವತಿಯನ್ನೇ ವಿವಾಹವಾಗುತ್ತಿದ್ದೆ, ಶೋಭಾ ಅವರು ಮದುವೆಯಾಗದಿರುವುದರಿಂಗ ಈ ರೀತಿ ಹೇಳಿಕೆ ನೀಡಿದ್ದಾರೆ
ಎಂಬ ತಿರುಗೇಟು ನೀಡಿದ್ದಾರೆ.
ಈ ಕುರಿತು ದಿನೇಶ್ ಗುಂಡುರಾವ್ ಪತ್ನಿ ಟಿಬು ರಾವ್ ಕೂಡಾ ಫೇಸ್ ಬುಕ್ ಪುಟದಲ್ಲಿ ತಿರುಗೇಟು ನೀಡಿದ್ದಾರೆ. ನಾನು ಮುಸ್ಲಿಂ
ಜನಾಂಗದಲ್ಲಿ ಜನಿಸಿರುವುದು, ನನ್ನ ಪತಿ ದಿನೇಶ್ ಗುಂಡುರಾವ್ ಅವರು ಬ್ರಾಹ್ಮಣರು ಎಂಬುದು ಗೋಪ್ಯವಾದ ವಿಷಯವೇನಲ್ಲ
ನಮ್ಮ ಖಾಸಗಿ ಬದುಕಿನೊಳಗೆ ಶೋಭಾ ಪ್ರವೇಶಿಸುತ್ತಿರುವುದನ್ನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
Comments