ಪ್ರಧಾನಿ ಮೋದಿಗೋಸ್ಕರ ಮುರಿದು ಬಿತ್ತು ಮದುವೆ?

ಮದುವೆ ಆಗಲು ಸಜ್ಜಾದ ಓರ್ವ ಯುವಕ-ಯುವತಿ ಪ್ರಧಾನಿ ಮೋದಿ ವಿಷಯದಲ್ಲಿ ಪರ ವಿರೋಧ ಮಾತನಾಡಿ ಜಗಳವಾಡಿರುವ
ಘಟನೆ ನಡೆದಿದೆ. ಜಗಳದಿಂದ ಅವರಿಬ್ಬರ ಮದುವೆ ಮುರಿದು ಬೀಳುವಷ್ಟರ ಮಟ್ಟಿಗೆ ಬಂದಿದೆ. ಉತ್ತರಪ್ರದೇಶ ಕಾನ್ಪುರ್ ದಲ್ಲಿ
ಬ್ಯುಸಿನೆಸ್ ಮಾಡಿಕೊಂಡಿದ್ದ ಯುವಕನಿಗೆ ಸರ್ಕಾರಿ ಉದ್ಯೋಗಿಯಾಗಿರೋ ಓರ್ವ ಯುವತಿಯ ಜೊತೆಗೆ ಮದುವೆ ಫಿಕ್ಸ್ ಆಗಿತ್ತು.
ಈ ವೇಳೆ ಯುವಕ-ಯುವತಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ವಾದಿಸಿದ್ದಾರೆ. ಯುವತಿ
ಮೋದಿ ಪರವಾಗಿ ಮಾತನಾಡುತ್ತಾ ಎಲ್ಲಾ ಚೆನ್ನಾಗಿದೆ ಎಂದಿದ್ದಾಳೆ. ಇಬ್ಬರ ವಾಗ್ವಾದ ತೀವ್ರಗೊಂಡು ಒಬ್ಬರನೊಬ್ಬರು ದೂಷಿಸಿಕೊಂಡಿದ್ದಾರೆ.
ಜಗಳ ದೊಡ್ಡದಾಗಿ ಮದುವೆ ಕ್ಯಾನ್ಸಲ್ ಮಾಡಿಕೊಳ್ಳುವವರೆಗೂ ಬಂದಿದೆ. ಯಾರು ಬುದ್ಧಿ ಹೇಳಿದರು ಯುವಕ ಯುವತಿ ರಾಜಿ ಆಗಿಲ್ಲ.
Comments