ಮೃತ ಆರ್ ಎಸ್ಎಸ್ ಕಾರ್ಯಕರ್ತ ಶರತ್ ನಿವಾಸಕ್ಕೆ ಡಿವಿಎಸ್ ಭೇಟಿ
ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ್ ಮನೆಗೆ ಇಂದು ಕೇಂದ್ರ ಸಚಿವ ಸದಾನಂದ ಗೌಡ ಭೇಟಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಥದಲ್ಲಿರುವ ಶರತ್ ಮನೆಗೆ ಭೇಟಿ ನೀಡಿದ ಡಿವಿಎಸ್ ಶರತ್ ತಂದೆ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಮಗನ ಸಾವನ್ನು ನೆನೆದು ಡಿ.ವಿ ಸದಾನಂದಗೌಡರ ಮುಂದೆ ಶರತ್ ತಂದೆ ಕಣ್ಣೀರು ಹಾಕಿದ್ರು,
ಡಿವಿಎಸ್ ಗೆ ಶಾಸಕ ಸುನೀಲ್ ಕುಮಾರ್, ಎಂಎಲ್ ಸಿ ಗಣೇಶ್ ಕಾರ್ಣಿಕ್ ಸಾಥ್ ನೀಡಿದ್ರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಡಿವಿಎಸ್, ಶರತ್ ಒಬ್ಬ ಅಮಾಯಕ ಯುವಕ, ಒಂದು ಕಪ್ಪುಚುಕ್ಕೆ ಇಲ್ಲದವನ ಕೊಲೆಯಾಯ್ತುಇಂತಹ ನೂರು ಶರತ್ ಹುಟ್ಟಿ ಬರ್ತಾರೆ, ಆಡಳಿತ ಸೂತ್ರ ಹಿಡಿದವರೇ ಇದರ ಹಿಂದೆಯಿದ್ದಾರೆ. ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
Comments