ಮತೀಯ ಗೂಂಡಾಗಳ ದಮನ - ಸಿಎಂ ಸೂಚನೆ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೋಮುಗಲಭೆಗಳನ್ನು ನಿಗ್ರಹಿಸುವಲ್ಲಿ ವಿಫಲರಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿರುವ ಸಿಎಂ ಸಿದ್ದರಾಮಯ್ಯ, ಮತೀಯ ಗೂಂಡಾಗಳನ್ನು ದಮನ ಮಾಡಲು ಗುಂಡಾ ಅಥವಾ ಕೋಕಾ ಕಾಯ್ಡೆ ಅಡಿ ನಿರ್ದಾಕ್ಷಿಣ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಕೋಮು ಗಲಭೆಗೆ ಕಾರಣರಾಗುವ ಮತೀಯ ಗೂಂಡಾಗಳ ಮೇಲೆ ನಿಗಾ ಇಡಬೇಕು. ಹಾಗೂ ಮಂಗಳೂರಿಗೆ ತಕ್ಷಣ ಪೊಲೀಸ್
ಮಹಾನಿರ್ದೇಶಕ ಆರ್. ಕೆ ದ್ತತಾ ತೆರಳಿ ಶಾಂತಿ ಸಭೆ ನಡೆಯಬೇಕು ಎಂದು ಸೂಚಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಘಟನೆ ಯಿಂದ ನೋವಾಗಿದೆ. ಮಂಗಳೂರು ಶಾಂತಿಪ್ರಿಯರ ನಾಡು, ಆದರೆ
ಕೆಲವು ಮತೀಯ ಸಂಘಟನೆಗಳ ಪ್ರಚೋದನೆಯಿಂದ ಅಲ್ಲಿ ಕೋಮುಸಂಘರ್ಷ ನಡೆದಿದೆ. ಅದನ್ನು ಮಟ್ಟಹಾಕಲು ಅಗತ್ಯ
ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಗತ್ಯವಿದ್ದರೆ, ಇಂತಹವರ ವಿರುದ್ಧ ಕೋಕಾ, ಗುಂಡಾ ಕಾಯ್ಡೆ ಅಡಿ ಬಂಧಿಸಿ
ಗಡೀಪಾರು ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದರು.
Comments