ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾ..!!

10 Jul 2017 4:12 PM | Politics
486 Report

ಬೆಂಗಳೂರು : ಮೋಹಕ ನಟಿ ಹಾಗೂ ಕಾಂಗ್ರೆಸ್ ನ ಮಾಜಿ ಸಂಸದೆ ರಮ್ಯಾ, ಪ್ರಧಾನಿ ಮೋದಿಯವರತ್ತ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷರಾದ ಜಿನ್ ಪಿಂಗ್ ಅವರನ್ನು ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಭೇಟಿಯಾದಾಗ ಗಡಿಯಲ್ಲಿ ಎರಡೂ ದೇಶಗಳ ಮಧ್ಯೆ ಎದ್ದಿರುವ ತಕರಾರಿನ ಬಗ್ಗೆ ಮಾತಾಡಿಲ್ಲ. ಇದು ಮೋದಿಯವರು ಮಾಡಿದ ತಪ್ಪು ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

ಕಳೆದೆರಡು ವಾರಗಳಿಂದ ಚೀನಾ-ಭಾರತದ ನಡುವೆ ಸಮರದ ಕಾರ್ಮೋಡ ಕವಿದಿದೆ. ಸಿಕ್ಕಿಂ ಗಡಿಯಲ್ಲಿ ಚೀನಾ ಸರ್ಕಾರ ತನ್ನ ಮಿಲಿಟರಿ ನಿಲ್ಲಿಸಿ ಕಾಲು ಕೆದರಿ ಜಗಳ ಕಾಯಲು ಸಿದ್ಧವಾಗಿದೆ. ಇದಕ್ಕೆ ಭಾರತೀಯ ಸೇನೆಯೂ ಸಡ್ಡು ಹೊಡೆದು ನಿಂತಿದೆ.ಇಂಥ ಪರಿಸ್ಥಿತಿಯಿದ್ದರೂ, ಉಭಯ ನಾಯಕರು ಪರಸ್ಪರ ಭೇಟಿಯಾಗುವ ಅವಕಾಶದಲ್ಲಿ ಮೋದಿಯವರು ಗಡಿಯಲ್ಲಿನ ಗಂಭೀರ ವಿಚಾರವನ್ನು ಚರ್ಚಿಸಿಯೇ ಇಲ್ಲ ಎಂದು ಟೀಕಿಸಿದ್ದಾರೆ.

Edited By

Shruthi G

Reported By

Shruthi G

Comments