ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ!
ಬೆಂಗಳೂರು: ವನಮಹೋತ್ಸವ -2017 ಕಾರ್ಯಕ್ರಮದಲ್ಲಿ ಬೆರಳಣಿಕೆಯ ಜನ ಮಾತ್ರ ಇದ್ದುದರಿಂದ ಆಕ್ರೋಶಗೊಂಡ ಮುಖ್ಯಮಂತ್ರಿಗಳು ಮತ್ತು ಸಚಿವ ರೈ ಕೆಂಡಾಮಂಡಲವಾಗಿದ್ದಾರೆ. ಜನರಿಗೆ ಇಂತಹ ಕಾರ್ಯಕ್ರಮದ ಕುರಿತು ಏಕೆ ಮಾಹಿತಿ ನೀಡಿಲ್ಲ, ಇದು ಪರಿಸರದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವಾಗಿದ್ದು, ಜನರಿಗೆ ಅರಿವು ಮೂಡಿಸಬೇಕಲ್ವಾ ಎಂದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಸಮಾರಂಭದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿರುವ ಸಿಎಂ ಕೋಮು ಸಂಘರ್ಷ ಆಗಬಾರದು, ಯಾರೇ ಆಗಲಿ ಪ್ರಚೋದನೆ ಕಾರಿ ಆಗಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು. ಜಿಲ್ಲೆಯ ಎಲ್ಲರಿಗೂ ಮನವಿ ಮಾಡುವುದೆಂದರೆ ಶಾಂತಿ ಕಾಪಾಡಿ, ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ, ಕರಾವಳಿಯಲ್ಲಿ ನೂರಾರು ವರ್ಷಗಳಿಂದ ಸರ್ವ ಧರ್ಮ ಸಮನ್ವಯಗಳಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂದರು.
Comments