ಗೃಹ ಖಾತೆಗೆ ಕೊಟ್ಟರೆ ಬೇಡ ಅನ್ನಲ್ಲ- ರಾಮಲಿಂಗಾರೆಡ್ಡಿ

ಬೆಂಗಳೂರು: ಸಂಪುಟದಲ್ಲಿ ಖಾಲಿ ಇರುವ ಮೂರು ಹುದ್ದೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶೀರ್ಘದಲ್ಲೇ ಭರ್ತಿ ಮಾಡಲಿದ್ದು,
ಗೃಹ ಖಾತೆ ಯಾರಿಗೆ ನೀಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇದ. ಗೃಹ ಖಾತೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಹೆಸರು ಕೇಳಿ ಬರುತ್ತಿದೆ. ಈ ಕುರಿತು ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, ಖಾತೆ ಕೊಟ್ಟರೆ ಯಾರು ಬೇಡ ಅಂತಾರೆ, ಯಾವ ಖಾತೆ
ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಹಿಂದೆ ಸಾರಿಗೆ ಖಾತೆಯನ್ನು ನಿಭಾಯಿಸಿದ್ದೇನೆ, ಯಾವುದೇ ಖಾತೆಯನ್ನು ನಾನು ಕೇಳುವುದಿಲ್ಲ,
ಅದರ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸುತ್ತರೆ, ಕೊಡದೇ ಇದ್ದರೂ ಬೇಸರವಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
Comments