ಪಾಕ್ ಕ್ಯಾನ್ಸರ್ ಪೀಡಿತ ಮಹಿಳೆಯಿಂದ ಸುಷ್ಮಾಗೆ ಮನವಿ
ನವದೆಹಲಿ: ಪಾಕ್ ನಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯೊಬ್ಬರ ವೈದ್ಯಕೀಯ ವೀಸಾ ನೀಡುವಂತೆ ಸಚಿವೆ ಸುಷ್ಮಾ
ಸ್ವರಾಜ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಪಾಕ್ ಮಹಿಳೆಯ ಅರ್ಜಿಯನ್ನು ರಾಯಭಾರಿ ಕಚೇರಿ ನಿರಾಕರಿಸಿದೆ,
೨೫ ವರ್ಷದ ಫೈಜಾ ತನ್ವೀರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಎರಡು ದೇಶಗಳ ನಡುವೆ ಹದಗೆಡುತ್ತಿರುವ ಸಂಬಂಧಗಳ ಕಾರಣ
ನಮ್ಮ ವೀಸಾ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತನ್ವೀರ್ ಅವರ ತಾಯಿ ಹೇಳಿದ್ದಾರೆ.
ಈ ಸಂಬಂಧ ಭಾರತೀಯ ಅಧಿಕಾರಿಗಳ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದಾರೆ. 'ದಯಮಾಡಿ ನನ್ನ
ಜೀವವನ್ನು ಉಳಿಸಲು ಸಹಾಯ ಮಾಡಿ ಎಂದು ಟ್ವೀಟ್ ಮಾಡಿರುವ ತನ್ವೀರ್', ಮತ್ತೊಂದು ಟ್ವೀಟ್ ನಲ್ಲಿ 'ಸುಷ್ಮಾ ಜೀ ನನಗೆ
ದಯಮಾಡಿ ಸಹಾಯ ಮಾಡಿ' ಎಂದು ಬೇಡಿಕೊಂಡಿದ್ದಾರೆ.
Comments