ಬಿಹಾರದಲ್ಲಿ ಮೀರಾ ಕುಮಾರ್ ಮತಯಾಚನೆ
ಪಾಟ್ನಾ: ರಾಷ್ಟ್ರಪತಿ ಚುನಾವಣೆಯ ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಇವತ್ತು ಸಂಜೆ ಪಾಟ್ನಾಗೆ ಭೇಟಿ ನೀಡುವುದು
ನಿಗದಿಯಾಗಿದೆ. ರಾಷ್ಟ್ರಪತಿ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದ ಪ್ರಮುಖನಾಯಕರು, ಶಾಸಕರನ್ನು ಭೇಟಿ ಮಾಡಿ
ಮೀರಾಕುಮಾರ್ ಮತಯಾಚನೆ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಭೇಟಿ ವೇಳೆ ಮೀರಾ ಕುಮಾರ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡುತ್ತಿಲ್ಲ. ಮೀರಾ ಕುಮಾರ್ ಭೇಟಿ
ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿದೆ. ರಾಷ್ಟ್ರಪತಿ ಅಭ್ಯರ್ಥಿಯಾಗಿರುವ
ಮೀರಾಕುಮಾರ್ ಕಾಂಗ್ರೆಸ್ ಸಂಸದರು ಹಾಗೂ ಶಾಸಕರನ್ನು ಭೇಟಿ ಮಾಡಿ ಮತ ಕೋರಲಿದ್ದಾರೆ, ಅದಾದ ಬಳಿಕ ಭೋಜ್ಪುರ
ಜಿಲ್ಲೆಯ ಗ್ರಾಮಕ್ಕೂ ಮೀರಾಕುಮಾರ್ ಪ್ರಯಾಣ ಬೆಳೆಸಲಿದ್ದಾರೆ. ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜುಲೈ
20ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
Comments