ಜಿ.ಪರಮೇಶ್ವರ್ ರಾಯಬಾಗ ಕ್ಷೇತ್ರದಿಂದ ಸ್ಪರ್ಧೆ?
ಬೆಳಗಾವಿ: ಜಿ ಪರಮೇಶ್ವರ್ ರಾಯಬಾಗ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುಮಟ್ಟಿಗೆ ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ
ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಅಥಣಿ ಹಾಗೂ
ರಾಯಭಾಗದಿಂದ ಸ್ಪರ್ಧಿಸುವ ಕುರಿತು ಒಂದು ಸುತ್ತು ಮಾತುಕತೆ ನಡೆಸಿದ್ದೇನೆ, ಅವರು ಬಹುತೇಕ ಒಪ್ಪಿಕೊಂಡಿದ್ದಾರೆ ಎಂದು
ತಿಳಿಸಿದರು.
ಮಾಧ್ಯಮಗಳ ಜತೆಗೆ ಮಾತನಾಡಿರುವ ಅವರು, ಜಿ.ಪರಮೇಶ್ವರ್ ರಾಯಬಾಗ ಕ್ಷೇತ್ರದಿಂದ ಸ್ಪರ್ಧಿಸುವುದು ಶೇ.99 ರಷ್ಟು ಖಚಿತ.
ಈ ಇಬ್ಬರು ನಾಯಕರು ಬೆಳಗಾವಿ ಜಿಲ್ಲೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅಥಣಿ ಸಮಾವೇಶದಲ್ಲಿ ಹೇಳಿದ್ದು ತರಾತುರಿ ಹೇಳಿಕೆಯಲ್ಲ
ಎಂದರು. ಇನ್ನು ಪಕ್ಷದ ಸಂಘಟನೆ ಕುರಿತುಇದೇ ವೇಳೆ ಮಾತನಾಡಿರುವ ಅವರು, ಪಕ್ಷ ಸಂಘಟಿಸಲು ನಾನು ಸತೀಶ್ ಜಾರಕಿಹೊಳಿ
ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Comments