ಲಾಲೂ ಬಿಹಾರದ ವಾದ್ರಾ ಇದ್ದಂತೆ
ನವದೆಹಲಿ. ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬಿಹಾರದ ರಾಬರ್ಟ್ ವಾದ್ರಾ ಆಗಿ ಹೋಗಿದ್ದಾರೆ ಎಂದು ಬಿಜೆಪಿ
ನಾಯಕ ಸುಶೀಲ್ ಮೋದಿ ಟೀಕಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಲಾಲೂ ಅವರ ಕುಟುಂಬದ ಆಸ್ತಿ
ವಿವರಗಳನ್ನು ಕಳೆದ 90 ದಿನಗಳಿಂದ ಬಿಡುಗಡೆ ಮಾಡುತ್ತಿದ್ದೇನೆ. ಕಳೆದ 12 ವರ್ಷಗಳಲ್ಲಿ 125 ಕಡೆ ಅಕ್ರಮವಾಗಿ ಭೂಸ್ವಾಧೀನ
ಮಾಡಿಕೊಂಡಿದ್ದು, ಇವರು ಬಿಹಾರದ ರಾಬರ್ಟ್ ವಾದ್ರಾ ಆಗಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಸಹೋದರ,
ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ವಿರುದ್ಧ ಕ್ರಮ ಕೈಗೊಳ್ಳಬೇಕು. ತೇಜಸ್ವಿ ಅವರಿಗೆ ಸಂಬಂಧಿಸಿದ ಮೂರು ಕಡೆ ಇರುವ
ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟು ಗೋಲು ಹಾಕಿಕೊಂಡಿವೆ. ಹೀಗಾಗಿ ಅವರನ್ನು ಹುದ್ದೆಯಿಂದ ಕೈಬಿಡಬೇಕು ಎಂದು
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸುಶೀಲ್ ಆಗ್ರಹಿಸಿದ್ದಾರೆ.
Comments