ರಾಜ್ಯಕ್ಕೆ ಇಂದು ರಾಮನಾಥ್ ಕೋವಿಂದ್
ಬೆಂಗಳೂರು ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಇಂದು ರಾಜ್ಯಕ್ಕೆ ಆಗಮಿಸಲಿದ್ದು,
ಮತಯಾಚನೆ ಸಲುವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಕೋವಿಂದ್, ರಾಜ್ಯ ಬಿಜೆಪಿ ವತಿಯಿಂದ ನಗರದ ಖಾಸಗಿ ಹೊಟೇಲ್
ನಲ್ಲಿ ಶಾಸಕರು, ಸಂಸದರ ವಿಶೇಷ ಸಭೆ ಕೆರಯಲಾಗಿದ್ದು, ರಾಮನಾಥ್ ಕೋವಿಂದ್ ಅವರು ಸಭೆಯಲ್ಲಿ ಭಾಗವಹಿಸಿ ಸಂಸದರು,
ಶಾಸಕರ ಜತೆಗೆ ಚರ್ಚೆ ನಡೆಸಿ ಮತಯಾಚನೆ ಮಾಡಲಿದ್ದಾರೆ.
ರಾಮನಾಥ್ ಕೋವಿಂದ್ ಅವರು ವಿಶೇಷ ವಿಮಾನದ ಮೂಲಕ ಇಂದು ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿ ಬಿಜೆಪಿ
ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದ ಗೌಡ ಮತ್ತಿತರರು ಕೋವಿಂದ್ ಅವರನ್ನು
ಬರಮಾಡಿಕೊಳ್ಳಲಿದ್ದಾರೆ.
Comments