ಅಚಲ್ ಕುಮಾರ್ ಜ್ಯೋತಿ ಮುಂದಿನ ಮುಖ್ಯ ಚುನಾವಣಾ ಆಯುಕ್ತ
ನವದೆಹಲಿ ಪ್ರಸ್ತುತ ಚುನಾವಣಾ ಆಯುಕ್ತರಾಗಿ ಅಚಲ್ ಕುಮಾರ್ ಜ್ಯೋತಿ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ
ಚುನಾವಣಾ ಆಯೋಗ ನೇಮಕ ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಅವರು ಜುಲೈ 6ರಂದು ನಿವೃತ್ತರಾಗುವವರು.
64 ವರ್ಷ ವಯಸ್ಸಿನ ಅಚಲ್ ಕುಮಾರ್ ಜ್ಯೋತಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1975ರ ಬ್ಯಾಚ್ ನ ಗುಜುರಾತ್ ಕೇಡರ್
ನಲ್ಲಿ ಆಡಳಿತಾತ್ಮಕ ಸೇವೆ (ಐಎಎಸ್) ಅಧಿಕಾರಿಯಾಗಿದ್ದ ಅಚಲ್ ಕುಮಾರ್ ಅವರು ಗುಜರಾತ್ ನ ವಿಚಕ್ಷಣಾ ಆಯುಕ್ತರಾಗಿ ಸೇವೆ
ಸಲ್ಲಿಸಿದ್ದಾರೆ. ಪಿಎಂ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಗುಜರಾತ್ ನ ಮುಖ್ಯ ಕಾರ್ಯದರ್ಶಿಯಾಗಿದ್ದರು.
Comments