ಮೀರಾ ಕುಮಾರ್ ಕುರಿತು ದೇವೇಗೌಡರ ಹೇಳಿಕೆ
ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿರುವ ಮೀರಾ ಕುಮಾರ್ ಗೆ ನಮ್ಮ ಬೆಂಬಲ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು ಬೇಟಿಯಾದ ಬಳಿಕ ಮಾತನಾಡಿದ ಅವರು, ಮೀರಾ ಕುಮಾರ್ ಸ್ಪೀಕರ್, ರಾಜಕಾರಣಿಯಾಗಿ ಸಾಕಷ್ಟು ಅನುಭವವಿರುವ ಮಹಿಳೆ. ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ.
ಬೆಂಗಳೂರಿಗೆ ಭೇಟಿ ನೀಡಿದ ಮೀರಾಕುಮಾರ್ ಅವರನ್ನು ಭೇಟಿಯಾದ ಬಳಿಕ ಗೌಡರು ಹೇಳಿದ್ದಾರೆ. ಜೆಡಿಎಸ್ ನ ಎಲ್ಲಾ ಮತಗಳೂ ಮೀರಾ ಅವರಿಗೆ ನೀಡುತ್ತೇವೆ. ಕೇರಳದಲ್ಲೂ ಅವರಿಗೆ ಬೆಂಬಲವಿದೆ. ಅವರನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನ ನಡೆಸುವುದಾಗಿ ಗೌಡರು ಹೇಳಿದ್ದಾರೆ.
Comments