ವಿವಿಧ ಜಿಲ್ಲೆಗಳಿಗೆ ಇಂದು ಭೇಟಿ ನೀಡಲಿರುವ ಕೆ.ಸಿ ವೇಣುಗೋಪಾಲ

ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿರುವ ಗೊಂದಲ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್
ಬೆಂಗಳೂರು: ಜಿಲ್ಲಾ ಕಾಂಗ್ರೆಸ್ ಘಟಕದಲ್ಲಿರುವ ಗೊಂದಲ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಇದೇ ತಿಂಗಳ ಇಂದಿನಿಂದ ೩೦ರವರೆಗೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಸಂಘಟನೆ ಚುರುಕು ಮುಟ್ಟಿಸಲು ಮುಂದಾಗಿದ್ದ ಅವರು, ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾವಾರು ಪ್ರಮುಖರ ಸಭೆ ನಡೆಸಿದ್ದರು. ಈ ವೇಳೆ ಹಾಸನ. ಬೆಳಗಾವಿ, ಮಂಗಳೂರು, ಮೈಸೂರು, ಧಾರವಾಡ, ಮಂಡ್ಯ , ಬಳ್ಳಾರಿ ಜಿಲ್ಲಾ ಘಟಕಗಳಲ್ಲಿ ಗೊಂದಲ ಇರುವುದು ಗಮನಕ್ಕೆ ಬಂದಿತ್ತು.
ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಟ್ಟು ತಳಮಟ್ಟದ ಕಾರ್ಯಕರ್ತನ ಅಹವಾಲು ಆಲಿಸುವುದಾಗಿ ಅವರು ಭರವಸೆ ನೀಡಿದ್ದರು. 29ರಂದು ಕೂಡಲ ಸಂಗಮದಲ್ಲಿ ನಡೆಯಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
Comments