ಹಿಂದಿ ರಾಷ್ಟ್ರಭಾಷೆ, ಹೆಚ್ಚು ಪ್ರಾಮುಖ್ಯತೆ ನೀಡಬೇಕು- ವೆಂಕಯ್ಯ ನಾಯ್ಡು

ಹಿಂದಿ ರಾಷ್ಟ್ರ ಭಾಷೆ, ಹಿಂದಿ ಭಾಷೆಯಿಲ್ಲದೇ ದೇಶ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ
ನವದೆಹಲಿ: ಹಿಂದಿ ರಾಷ್ಟ್ರ ಭಾಷೆ, ಹಿಂದಿ ಭಾಷೆಯಿಲ್ಲದೇ ದೇಶ ಮುಂದುವರಿಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ. ಹಿಂದಿ ಹೇರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಹಿಂದಿ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಹಿಂದಿ ರಾಷ್ಟ್ರ ಭಾಷೆಯಾಗಿದೆ. ಜನರು ಆಂಗ್ಲ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ದುರಾದೃಷ್ಟಕರ ಎಂದರು.
ನಾವು ಎಲ್ಲಾ ಭಾಷೆಗಳನ್ನು ಕಲಿಯಬೇಕು, ಆದರೆ ಇಂಗ್ಲೀಷ್ ಕಲಿಕೆ ಕುರಿತು ನಮ್ಮ ಆಲೋಚನೆಗಳು ಬದಲಾಗುತ್ತಿವೆ. ಇದು ತಪ್ಪು, ಇದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ, ಉದ್ಯೋಗವಕಾಶಗಳಿಗಾಗಿ ಜನರು ಇಂಗ್ಲೀಷ್ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ದುರಾದೃಷ್ಟಕರ ಸಂಗತಿ, ಈ ಕುರಿತು ದೇಶ ಚರ್ಚೆ ನಡೆಸಬೇಕಿದೆ. ನಮ್ಮ ತಾಯಿನಾಡು ಭಾಷೆಗೆ ನಾವು ಹೆಚ್ಚು ಪ್ರೋತ್ಸಾಹ ನೀಡಬೇಕು ಇದರೊಂದಿಗೆ ಹಿಂದಿ ಭಾಷೆಗೂ ನೀಡಬೇಕು ಎಂದು ತಿಳಿಸಿದ್ದಾರೆ.
Comments