ಪ್ರಧಾನಿ ಮೂರು ದೇಶಗಳ ಪ್ರವಾಸ ಆರಂಭ

ಪ್ರಧಾನಿ ಮೋದಿ ಇಂದಿನಿಂದ ಪೋರ್ಚ್ ಗಲ್, ಅಮೆರಿಕಾ ಹಾಗೂ ನೆದರ್ ಲ್ಯಾಂಡ್ ಸಹಿತ ಮೂರು ದೇಶಗಳಿಗೆ ಪ್ರವಾಸ ಆರಂಭವಾಗಿದೆ
ನವದೆಹಲಿ: ಪ್ರಧಾನಿ ಮೋದಿ ಇಂದಿನಿಂದ ಮೂರು ದೇಶಗಳು ಪೋರ್ಚ್ ಗಲ್, ಅಮೆರಿಕಾ ಹಾಗೂ ನೆದರ್ ಲ್ಯಾಂಡ್ ಸಹಿತ ಮೂರು ದೇಶಗಳಿಗೆ ಪ್ರವಾಸ ಆರಂಭವಾಗಿದೆ. ಮೂರು ರಾಷ್ಟ್ರಗಳ ಜತೆಗೆ ಸಂಬಂಧವನ್ನು ವೃದ್ಧಿಸಲು ಉದ್ದೇಶಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ಪೋರ್ಚ್ ಗಲ್ ಗೆ ಭೇಟಿ ನೀಡಲಿರುವ ಅವರು , ಭಾನುವಾರ ಹಾಗೂ ಸೋಮವಾರ ಅಮೆರಿಕಾದಲ್ಲಿರಲಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಶೇಷವೆಂದರೆ ಭಾರತದ ಪ್ರಧಾನಿ ಮೋದಿ ಹಾಗೂ ಟ್ರಂಪ್ ಅವರ ಚೊಚ್ಚಲ ಭೇಟಿ ಇದಾಗಿದ್ದು. ದ್ವಿಪಕ್ಷೀಯ ಸಂಬಂಧ ಕುರಿತು ಟ್ರಂಪ್ ಜತೆಗೆ ಸುಮಾರು ೫ ಗಂಟೆಗಳವರೆಗೂ ಮೋದಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಅಲ್ಲದೇ ವೈಟ್ ಹೌಸ್ ನಲ್ಲಿ ಟ್ರಂಪ್ ಜತೆಗೆ ಭೋಜನಕೂಟದಲ್ಲಿ ಭಾಗಿಯಾಗಲಿರುವ ಮೊದಲ ನಾಯಕರಾಗಲಿದ್ದಾರೆ ಪ್ರಧಾನಿ ಮೋದಿ. ಇದಾದ ಮೇಲೆ ಅವರು ನೆಂದರ್ ಲ್ಯಾಂಡ್ ಗೆ ಭೇಟಿ ನೀಡಿ ಅಲ್ಲಿನ ರಾಷ್ಟ್ರ ನಾಯಕರ ಜತೆಗೆ ಮಾತುಕತೆ ನಡೆಸಿ, ಭಾರತಕ್ಕೆ ವಾಪಸ್ಸಾಗಲಿದ್ದಾರೆ.
Comments