ನಾಮಪತ್ರ ಸಲ್ಲಿಕೆ: ಮೋದಿ- ಅಡ್ವಾಣಿ- ಶಾ ಕೈ ಹಿಡಿದು ರಾಮ್ ನಾಥ್ ಶಕ್ತಿ ಪ್ರದರ್ಶನ

ನವದೆಹಲಿ: ಎನ್ ಡಿಎ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಮ್ ನಾಥ್ ಕೋವಿಂದ್ ಸಂಸತ್ ಭವನದಲ್ಲಿ ನಾಮನಿರ್ದೇಶನ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ- ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ರಾಮ್ ನಾಥ್ ಕೋವಿಂದ್ ಪ್ರಧಾನಿ ಮೋದಿ, ಎಲ್.ಕೆ ಅಡ್ವಾಣಿ ಹಾಗೂ ಅಮಿತ್ ಶಾ ಅವರ ಕೈಹಿಡಿದು ಒಟ್ಟಾಗಿ ಕೈ ಮೇಲತ್ತಿ ಶಕ್ತಿ ಪ್ರದರ್ಶನ ಮಾಡಿದರು.
ಒಟ್ಟು ನಾಲ್ಕು ಸೆಟ್ ನಾಮಪತ್ರಗಳನ್ನು ಕೋವಿಂದ್ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು, ಈ ವೇಳೆ ಮಾತನಾಡಿರುವ ಅವರು, ‘ನನ್ನನ್ನು ಆಯ್ಕೆ ಮಾಡಿದವರಿಗೆ ಧನ್ಯವಾದಗಳು, ಹುದ್ದೆಯ ಗೌರವ ಕಾಪಾಡಲು ಪ್ರಯತ್ನಿಸುತ್ತೇನೆ’ ಎಂದರು. ರಾಷ್ಟ್ಪಪತಿ ಹುದ್ದೆಗೆ ಚುನಾವಣೆ ಜುಲೈ 17ರಂದು ಮತದಾನ ನಡೆಯಲಿದೆ. ಜುಲೈ 20ರಂದು ಎಣಿಕೆ ನಡೆಯಲಿದೆ. 24ರಂದು ಪ್ರಣಬ್ ಮುಖರ್ಜಿ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ.
Comments