ರಂಗೇರಿದ ರಾಷ್ಟ್ರಪತಿ ಚುನಾವಣಾ ಕಣ,. ರಾಮನಾಥ್ ಇಂದು ನಾಮಪತ್ರ ಸಲ್ಲಿಕೆ
ನವದೆಹಲಿ : ರಾಷ್ಟ್ರಪತಿ ಚುನಾವಣಾ ಕಣ ರಂಗೇರಿದೆ. ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಜುಲೈ 17 ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಕೋವಿಂದ್ ಜೂನ್ ಇಂದು ನಾಮಪತ್ರ ಸಲ್ಲಿಸಲಿದ್ದು, ಬೆಳಿಗ್ಗೆ ೧೧ ಗಂಟೆಗೆ ರಾಮ್ ನಾಥ್ ೧೦ನೇ ಅಕ್ಬರ್ ರಸ್ತೆಯಿಂದ ಹೊರಟು ಸಂಸತ್ ಭವನದ ಗ್ರಂಥಾಲಯ ತಲುಪಲಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಾಗೂ ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ವೇಳೆ ಉಪಸ್ಥಿತರಿರಲಿದ್ದಾರೆ. ರಾಷ್ಟ್ಪಪತಿ ಹುದ್ದೆಗೆ ಚುನಾವಣೆ ಜುಲೈ 17ರಂದು ಮತದಾನ ನಡೆಯಲಿದೆ. ಜುಲೈ 20ರಂದು ಎಣಿಕೆ ನಡೆಯಲಿದೆ. 24ರಂದು ಪ್ರಣಬ್ ಮುಖರ್ಜಿ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ.
Comments