ರಾಮ್ ನಾಥ್ ಕೋವಿಂದ್ ರಿಗೆ ಬಿಎಸ್ ವೈ ಅಭಿನಂದನೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನವದೆಹಲಿಯಲ್ಲಿ ಅಭಿನಂದಿಸಿದ್ದಾರೆ. ರಾಮ್ ನಾಥ್ ಕೋವಿಂದ್ ಅವರ ನಾಮಪತ್ರಕ್ಕೆ ಸೂಚಕರಾಗಿ ಬಿಎಸ್ ವೈ ಸಹಿ ಹಾಕಿದರು.
ಬಿ.ಎಸ್ ಯಡಿಯೂರಪ್ಪ ಅವರನ್ನು ರಾಮ್ ನಾಥ್ ಕೋವಿಂದ್ ಅವರಿಗೆ ಸೂಚಕರನ್ನಾಗಿ ನೇಮಿಸುವ ಮೂಲಕ ಬಿಜೆಪಿ ನಾಯಕರು ಬಿಎಸ್ ವೈ ಅವರಿಗೆ ಮಹತ್ವದ ಜವಾಬ್ದಾರಿ ನೀಡಿದ್ದರು. ಬಿಹಾರದ ರಾಜ್ಯಪಾಲ ರಾಗಿರುವ ರಾಮ್ ನಾಥ್ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ನಿನ್ನೆ ಆಯ್ಕೆ ಮಾಡಿತ್ತು. ಆಯ್ಕೆ ಕ್ರಮವನ್ನು ಬಿ.ಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ.
ಉತ್ತರಪ್ರದೇಶದ ಕಾನ್ ಪುರ್ ಜಿಲ್ಲೆಯ ದಲಿತ ಕುಟುಂಬಕ್ಕೆ ಸೇರಿದವರಾಗಿರುವ ರಾಮ್ ನಾಥ್, ಅಕ್ಟೋಬರ್ 1,1945ರಲ್ಲಿ ಜನಿಸಿದರು , ಸದ್ಯ ಬಿಹಾರ ರಾಜ್ಯಪಾಲರಾಗಿದ್ದಾರೆ. ರಾಮ್ ನಾಥ್ ವೃತ್ತಿಯಲ್ಲಿ ವಕೀಲರು, ದೆಹಲಿ, ಸುಪ್ರಿಂಕೋರ್ಟ್ ನಲ್ಲಿ ಸುಮಾರು 16 ವರ್ಷ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 90ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದ ಅವರು, 1998-2002ರವರೆಗೆ ಬಿಜೆಪಿ ದಲಿತ ಮೋರ್ಚದ ಅಧ್ಯಕ್ಷರಾಗಿದ್ದರು.
Comments