ಡಿ.12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಸೇರುತ್ತಾರಾ?
ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಆಗುವುದು ಖಚಿತವಾಗಿದೆ ಎಂದು ಹಿಂದೂ ಮಕ್ಕಳ ಕಚ್ಚಿ (ಎಚ್ಎಕೆ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಅರ್ಜುನ್ ಸಂಪತ್ ಹೇಳಿದ್ದಾರೆ. ಸೋಮವಾರ ಬೆಳಿಗ್ಗೆ ಅರ್ಜುನ್ ಸಂಪತ್ ರಜನಿಕಾಂತ್ ಅವರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿ ಆಗಿ ಮಾತುಕತೆ ನಡೆಸಿದರು.
ರಜನಿಕಾಂತ್ ನಿವಾಸದಲ್ಲಿ ಸುಮಾರು ೧ ಗಂಟೆಗಳ ಕಾಲ ಅರ್ಜುನ್ ಸಂಪತ್ ರಜನಿಕಾಂತ್ ಅರನ್ನು ರಾಜಕೀಯಕ್ಕೆ ಬರುವಂತೆ ಮನವಿ ಮಾಡಿರುವುದಾಗಿ ಅರ್ಜುನ್ ತಿಳಿಸಿದ್ದಾರೆ. ಕಳೆದ ೫೦ ವರ್ಷಗಳಿಂದ ತಮಿಳನಾಡು ದ್ರಾವಿಡ ಪಕ್ಷ ಗಳ ಆಡಳಿತದಿಂದ ಬಳಲಿದೆ. ಹಾಗಾಗಿ ತಮಿಳುನಾಡು ಜನತೆಗೆ ಅವರ ಸೇವೆ ಬೇಕಾಗಿದ್ದು, ಇಲ್ಲಿನ ರಾಜಕೀಯ ಪರಿಸ್ಥಿತಿಗೆ ಅಂತ್ಯ ಹಾಡಬೇಕಾಗಿದೆ ಎಂದಿದ್ದಾರೆ.
ರಜನಿಕಾಂತ್ ಡಿಸೆಂಬರ್ ೧೨ರ ತಮ್ಮ ೬೭ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಮೂಲಗಳಿಂದ ಸಿಕ್ಕಿದೆ. ರಜನಿಕಾಂತ್ ಈಗ ಇರುವ ಯಾವುದೇ ಪಕ್ಷ ಸೇರ್ಪಡೆಯಾಗದೆ ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ. 'ಕಾಲಾ' ಚಿತ್ರ ರಜನಿ ಅವರ ಕೊನೆಯ ಚಿತ್ರವಾಗಲಿದ್ದು, ಮುಂದಿನ ವರ್ಷ ಅವರು ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments