ಸಚಿವ ರಮಾನಾಥ್ ರೈ ಹೇಳಿಕೆ, ವಿಧಾನಸಭೆಯಲ್ಲಿ ಕೋಲಾಹಲ
ಬೆಂಗಳೂರು: ಆರ್ ಎಸ್ ಎಸ್ ಪ್ರಮುಖ ನಾಯಕ ಪ್ರಭಾಕರ್ ಭಟ್ ಅವರ ವಿರುದ್ಧ ಅರಣ್ಯ ಸಚಿವ ರಮಾನಾಥ್ ರೈ ನೀಡಿದ್ದ ಹೇಳಿಕೆಯ ವಿರುದ್ಧ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಜಗದೀಶ್ಶೆಟ್ಟರ್ ಈ ವಿಚಾರ ಪ್ರಸ್ತಾಪ ಮಾಡಿದ್ರು. ಸಚಿವ ರಮಾನಾಥ್ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಆಡಳಿತ ವೈಖರಿಗೆ ಸಚಿವರ ಹೇಳಿಕೆಯೇ ಸಾಕ್ಷಿ. ಕೂಡಲೇ ಈ ಹೇಳಿಕೆಯನ್ನು ಸಚಿವ ರಮಾನಾಥ್ ರೈ ವಾಪಸ್ ಪಡೆಯಬೇಕು. ಅಲ್ಲದೇ ಕ್ಷಮೆಯಾಚಿಸಬೇಕು. ಜಿಲ್ಲೆಯಲ್ಲಿ ಅನಗತ್ಯವಾದ ಆರ್ ಎಸ್ ಎಸ್ ನಾಯಕರ ಮೇಲಿನ ಸುಳ್ಳು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ ಎಂದು ವಿಧಾನಸಭೆ ಕಲಾಪದ ವೇಳೆ ಜಗದೀಶ್ ಶೆಟ್ಟರ್ ತಿಳಿಸಿದರು.
Comments