ಲಾಲು ಪುತ್ರ ತೇಜ್ ಪ್ರತಾಪ್ ಪೆಟ್ರೋಲ್ ಪಂಪ್ ಲೈಸನ್ಸ್ ರದ್ದು

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ, ಬಿಹಾರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಅವರ ಪೆಟ್ರೋಲ್ ಪಂಪ್ ಲೈಸನ್ಸ್ ರದ್ದು ಮಾಡಲಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ಲಿಮಿಟೆಡ್ ಲೈಸನ್ಸ್ ರದ್ದುಗೊಳಿಸಿದೆ.
ಲೈಸನ್ಸ್ ಪಡೆಯಲು ತಪ್ಪು ಮಾಹಿತಿ ನೀಡಿರುವುದಕ್ಕೆ ವಿವರಣೆ ಕೋರಿ ಕಳೆದ ಮೇ ೩೧ರಂದು ಜಾರಿಗೊಳಿಸಲಾಗಿದ್ದ ನೊಟೀಸ್ ಗೆ ತೃಪ್ತಿಕರ ಉತ್ತರವನ್ನು ನೀಡುವಲ್ಲಿ ತೇಜ್ ಪ್ರತಾಪ್ ಯಾದವ್ ವಿಫಲರಾಗಿರುವುದರಿಂದ ಅವರಿಗೆ ನೀಡಲಾಗಿದ್ದ ಪೆಟ್ರೋಲ್ ಪಂಪ್ ಗುತ್ತಿಗೆಯನ್ನು ರದ್ದು ಮಾಡಲಾಗಿದೆ ಎಂದು ಮೂಲಗಳ ತಿಳಿಸಿವೆ. 'ನೀವು ಪೆಟ್ರೋಲ್ ಪಂಪ್ ಲೈಸನ್ಸ್ ಪಡೆದುಕೊಂಡಿದ್ದು ಹೇಗೆ ಎಂಬುದನ್ನು ೧೫ ದಿನದ ಒಳಗೆ ತಿಳಿಸಿ' ಎಂದು ಬಿಪಿಸಿಎಲ್ ಸಚಿವ ತೇಜ್ ಪ್ರತಾಪ್ ಗೆ ಬಿಪಿಸಿಎಲ್ ನೊಟೀಸ್ ಜಾರಿ ಮಾಡಿತ್ತು.
Comments