ರಾಷ್ಟ್ರಪತಿ ಆಯ್ಕೆ,. ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಗಾಗಿ ನಾಮನಿರ್ದೇಶನ ಹತ್ತಿರ ಬರುತ್ತಿದ್ದು, ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಗಳನ್ನು ನಿರ್ಧರಿಸಲು ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಎನ್ ಡಿಎಯೇತರ ೧೭ ಪಕ್ಷಗಳ ಜತೆಗೆ ಸೋನಿಯಾ ಗಾಂಧಿ ಇಂದು ಸಂಜೆ ೪ಕ್ಕೆ ಸಭೆ ಆಯೋಜನೆ ಮಾಡಿದ್ದಾರೆ.
ಕಳೆದ ತಿಂಗಳು ಕಾಂಗ್ರೆಸ್ ನಿಂದ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿ ಹೆಸರನ್ನು ಚರ್ಚಿಸಲು ವಿಪಕ್ಷದವರನ್ನು ಸೋನಿಯಾ ಗಾಂಧಿ ಔತಣಕೂಟ ಹಮ್ಮಿಕೊಂಡಿದ್ದರು. ಬಿಜು ಜನತಾ ದಳ, ತೆಲಂಗಾಣ ರಾಷ್ಟ್ರೀಯ ಸಮಿತಿ ಸೇರಿದಂತೆ ಎನ್ ಡಿಎಯೇತರ ೧೪ ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಪ್ರಸ್ತುತ ರಾಷ್ಟ್ರಪತಿಯಾಗಿರುವ ಪ್ರಣಬ್ ಮುಖರ್ಜಿ ಅವರ ಹೆಸರು ಜುಲೈ ೨೪ಕ್ಕೆ ಮುಕ್ತಾಯಗೊಳ್ಳಲಿದೆ.
ಯುಪಿಎ ರಾಷ್ಟ್ರಪತಿ ಚುನಾವಣೆ ಚರ್ಚೆ ಸಂಬಂಧ ೧೦ ಸದಸ್ಯರ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್,ಮಲ್ಲಿಕಾರ್ಜುನ್ ಖರ್ಗೆ, ಜೆಡಿಯು ನಾಯಕ ಶರದ್ ಯಾದವ್, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಸಿಪಿಐ ನಾಯಕ ಸೀತಾರಾಮ್ ಯೆಚೂರಿ, ಟಿಎಂಸಿ ನಾಯಕ ಡೆರೆಕ್ ಓಬ್ರಿಯನ್, ಎಸ್ಪಿ ನಾಯಕ ರಾಮಗೋಪಾಲ್ ಯಾದವ್, ಬಿಎಸ್ಪಿ ಸತೀಶ್ ಚಂದ್ರ ಮಿಶ್ರಾ, ಡಿಎಂಕೆ ನಾಯಕ ಭಾರತಿ, ಎನ್ ಸಿಪಿ ನಾಯಕ ಪಟೇಲ್ ಭಾಗಿಯಾಗಿದ್ದಾರೆ.
Comments