ರಾಷ್ಟ್ರಪತಿ ಚುನಾವಣೆ ಜನಾದೇಶ ನಮ್ಮೊಂದಿಗಿದೆ

ನವದೆಹಲಿ: ಜನಾದೇಶ ಸರ್ಕಾರದ ಪರವಾಗಿದ್ದು, ರಾಷ್ಟ್ರಪತಿ ಚುನಾವಣೆ ಕೂಡ ಜನಾದೇಶ ಮೂಲಕವೇ ನಡೆಯಲಿದೆ. ಇದನ್ನು ಅರಿತುಕೊಂಡು ಸರ್ಕಾರದೊಂದಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ರಾಷ್ಟ್ರಪತಿ ಚುನಾವಣೆ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿ ಜೊತೆಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದರು, ರಾಷ್ಟ್ರಪತಿ ಚುನಾವಣೆಗೂ ಮುನ್ನ ಬಿಜೆಪಿ ೩ ಸದಸ್ಯರ ಚುನಾವಣಾ ಸಮಿತಿ ರಚಿಸಲು ತೀರ್ಮಾನಿಸಿದ್ದು, ಅಮಿತ್ ಶಾ ನೇತೃತ್ವದಲ್ಲಿ ಈ ಸಮಿತಿಯಲ್ಲಿ ನಾಯ್ಡು ರಾಜ್ ನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿಯವರು ಇದ್ದಾರೆಂದು ಹೇಳಲಾಗುತ್ತಿದೆ.
ಆಯ್ಕೆ ಪ್ರಕ್ರಿಯೆಗಳನ್ನು ನಾವು ಈಗಾಗಲೇ ಆರಂಭಿಸಿದ್ದೇವೆ. ಅಮಿತ್ ಶಾ ಹಾಗೂ ಜೇಟ್ಲಿಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಪ್ರಸ್ತುತ ರಾಜನಾಥ್ ಸಿಂಗ್ ಅವರು ಮಿಜೊರಾಂನಲ್ಲಿದ್ದು, ಅವರೊಂದಿಗೂ ಸಮಾಲೋಚನೆ ನಡೆಸಿದ್ದೇವೆ. ಶೀರ್ಘದಲ್ಲೇ ಎಲ್ಲಾ ನಾಯಕರ ಜತೆಗೆ ಮಾತುಕತೆ ನಡೆಸಿ ಇತರ ರಾಜಕೀಯ ಪಕ್ಷಗಳ ಜೊತೆಗೆ ಮಾತುಕತೆ ನಡೆಸುತ್ತೇವೆ. ಎಲ್ಲರ ಸಹಕಾರ, ಬೆಂಬಲವನ್ನು ಪಡೆಯುತ್ತೇವೆ ಎಂದು ನಾಯ್ಡು ಹೇಳಿದರು.
Comments