‘ಬಳೆ’ ಎಸೆದವರಿಗೆ ಸ್ಮೃತಿ ಇರಾನಿ ದಿಟ್ಟ ಉತ್ತರ
ಅಹಮದಾಬಾದ್ : ಕೇಂದ್ರದ ಮೋದಿ ಸರ್ಕಾರ ಮೂರು ವರ್ಷಗಳ ಪೂರೈಸಿದ ಹಿನ್ನಲೆಯಲ್ಲಿ ಸಚಿವೆ ಸ್ಮೃತಿ ಇರಾನಿ ಮೇಲೆ ಯುವಕನೊರ್ವ ಬಳೆ ಎಸೆದ ಘಟನೆ ವರದಿಯಾಗಿದೆ. ಗುಜುರಾತ್ ನ ಅಮರೇಲಿ ಜಿಲ್ಲೆಯಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಭಾಗವಹಿಸಲು ಬಂದಿದ್ದರು. ಈ ವೇಳೆ ಸ್ಮೃತಿ ಇರಾನಿ ಕಡೆಗೆ ಯುವಕನೊಬ್ಬ ಬಳೆ ಎಸೆದ ಘಟನೆ ನಡೆದಿದೆ.
ಮೋದಿ ಸರ್ಕಾರ ೩ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಸಚಿವೆ ಸ್ಮೃತಿ ಇರಾನಿ ಗುಜುರಾತ್ ಗೆ ಬಂದಿದ್ದರು. ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಏಕಾ ಏಕಿ ಎದ್ದು ನಿಂತ ಯುವಕ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಮಾಡಿದನಲ್ಲದೇ ಸ್ಮೃತಿ ಇರಾನಿ ಕಡೆಗೆ ಬಳೆಗಳನ್ನು ಎಸೆದಿದ್ದಾನೆ, ಸದ್ಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವೆ ಸ್ಮೃತಿ ಚುನಾವಣೆ ಸಮೀಪಿಸುತ್ತಿದೆ. ಮಹಿಳೆಯ ಮೇಲೆ ಆಕ್ರಮಣ ಮಾಡಲು ಪುರುಷನೊಬ್ಬನನ್ನು ಕಾಂಗ್ರೆಸ್ ಕಳುಹಿಸಿದೆ. ಕಾಂಗ್ರೆಸ್ ನ ಈ ಸ್ಟ್ರಾಟರ್ಜಿ ತಪ್ಪಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಆರೋಪ ಮಾಡಿದ್ದಾರೆ.
Comments