ಸಿನಿಮಾ ಹಾಲ್.. ಮಾಲ್ ಗೆ ಹೋಗುವ ಸೊಸೆ ಬೇಡ!!
ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ಡಿ ದೇವಿ ತಮ್ಮಿಬ್ಬರ ಮಕ್ಕಳಿಗೆ ಹೆಣ್ಣು ನೋಡುತ್ತಿದ್ದಾರಂತೆ. ತಮ್ಮ ಮಕ್ಕಳ ಮದುವೆ ಬಗ್ಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಬ್ಡಿ ದೇವಿ ಹೇಳಿಕೊಂಡಿದ್ದಾರೆ. ಪುತ್ರ ತೇಜ್ ಪ್ರತಾಪ್ ಹಾಗೂ ತೇಜಸ್ವಿ ಯಾದವ್ ಬಿಹಾರ ಸರ್ಕಾರದಲ್ಲಿ ಹಾಲಿ ಮಂತ್ರಿಗಳಾಗಿದ್ದಾರೆ.
ಮೂಲಗಳ ಪ್ರಕಾರ ೧೧ ಜೂನ್ ರಂದು ರಾಬ್ಡಿ ದೇವಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಈ ವೇಳೆ ಮಾತನಾಡಿರುವ ಅವರು, ಸಿನಿಮಾ ಹಾಲ್, ಮಾಲ್ ಗಳಿಗೆ ಹೋಗುವ ಸೊಸೆ ಬೇಡ ಎಂದಿದ್ದಾರೆ. ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಗಾಗಿ ಹೆಣ್ಣು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈಗಾಗ್ಲೇ ಹಲವು ಹೆಣ್ಣು ನೋಡಿದ್ದೇನೆ. ಬಹಳಷ್ಟು ಜನ ಹೆಣ್ಣು ಕೊಡುವುದಾಗಿ ಮುಂದೆ ಬಂದಿದ್ದಾರೆ. ಯಾವುದು ಸೆಟ್ ಆಗಿಲ್ಲ, ನಮ್ಮ ಮನೆಗೆ ಸೊಸೆಯಾಗಿ ಬರುವ ಹೆಣ್ಣು ಕುಟುಂಬವನ್ನು ಚೆನ್ನಾಗಿ ನೋಡಿ ಕೊಂಡು ಹೋಗಬೇಕು ಎಂದು ರಾಬ್ಡಿ ದೇವಿ ಹೇಳಿದ್ದಾರೆ.
ಲಾಲು ದಂಪತಿಗೆ ೭ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಇದ್ದಾರೆ. ಗಂಡು ಮಕ್ಕಳಿಬ್ಬರು ಈಗ ಬಿಹಾರದಲ್ಲಿ ಹಾಲಿ ಸಚಿವರು ಎಂಬುದು ಗಮನಾರ್ಹ.
Comments