ಸಚಿವ ರಾಧಾ ಮೋಹನ್ ಮೇಲೆ ಮೊಟ್ಟೆ ಎಸೆತ
ಭುವನೇಶ್ವರ್: ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರ ಕಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆ ನಡೆದಿದೆ.
ಜತ್ನಿಯಲ್ಲಿ ನಡೆಯಲಿರುವ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಕಾರ್ಯಕ್ರಮಕ್ಕೆ ಸಚಿವರು ತೆರಳುತ್ತಿದ್ದ ವೇಳೆ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ೬ ಮಂದಿ ರೈತರು ಪೊಲೀಸರ ಗುಡೇಟಿಗೆ ಬಲಿಯಾಗಿರುವುದರಿಂದ ಪ್ರತಿಭಟನೆ ನಡೆಯುತ್ತಿದೆ.
ಈ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಧ್ಯಪ್ರದೇಶದಲ್ಲಿ ರೈತರ ಪ್ರತಿಭಟನೆ ತಾರಕ್ಕೇರಿದ್ದ ಸಂದರ್ಭದಲ್ಲೇ ಕೆಲ ದಿನದ ಹಿಂದೆ ಬಿಹಾರದ ಮೊತಿಹರಿಯಲ್ಲಿ ಯೋಗಗುರು ರಾಮ್ ದೇವ್ ಆಯೋಜಿಸಿದ್ದ ಶಿಬಿರದಲ್ಲಿ ಸಚಿವರು ಪಾಲ್ಗೊಂಡಿದ್ದರು ಇದು ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.
Comments