ಕಾಂಗ್ರೆಸ್ ಶಾಸಕಾಂಗ ಸಭೆಗೂ ಶಾಸಕರ ಹಾಜರಿ ಸಮಸ್ಯೆ
ಬೆಂಗಳೂರು: ಇವತ್ತು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಶಾಸಕರ ನಿರಾಸಕ್ತಿಯಿಂದ ತಡವಾಗಿ ಆರಂಭವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಶಾಸಕರು ಹಾಗೂ ಸಂಸದರಿಗೆ ಕಾದು ಕುಳಿತಿದ್ದರು. ಇದೇ ವೇಳೆ ಸದನಕ್ಕೆ ಬಾರದ ಶಾಸಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ರು.
ಇಂದಿನಿಂದ ಪ್ರತಿ ಶಾಸಕರು ಸದನಕ್ಕೆ ಹಾಜರಾಗಬೇಕು ಎಂದು ಎಲ್ಲಾ ಶಾಸಕರಿಗೂ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ಸದನದ ಗೌರವ ಬಗ್ಗೆ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರಿಗೆ ಕಟ್ಟಪಣೆ ಮಾಡಿದ ಘಟನೆ ನಡೆದಿದೆ. ಬೆಳಿಗ್ಗೆ ೮.೩೦ಕ್ಕೆ ಆರಂಭವಾಗಬೇಕಿದ್ದ ಶಾಸಕಾಂಗ ಸಭೆಗೆ ಶಾಸಕರು ಹಾಜರಾಗದೇ ನಿರಾಸಕ್ತಿ ತೋರಿಸಿದ್ದು, ಇದೇ ವೇಳೆ ಸಿಎಂಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರೇಮೇಶ್ವರ್ ಸಾಥ್ ನೀಡಿದ್ದಾರೆ.
Comments