ಬ್ರಿಟನ್ ಸಾರ್ವತ್ರಿಕ ಚುನಾವಣೆ.. ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಇಂದು ಬ್ರಿಟನ್ ನಲ್ಲಿ ಭಯೋತ್ಪಾದನೆ ಬೆದರಿಕೆ ಮಧ್ಯೆಯೂ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಪ್ರಧಾನಿ ತೆರೆಸಾ ಚುನಾವಣೆ ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದನೆಯ ದಾಳಿ ಬೆನ್ನಲ್ಲೇ ಚುನಾವಣೆ ಎದುರಿಸುತ್ತಿದ್ದಾರೆ. ಕನ್ಸರ್ವೇಟಿವ್ ಪಕ್ಷದಿಂದ ಪ್ರಧಾನಿ ಥೆರೇಸಾ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದರೆ, ಲೇಬರ್ ಪಕ್ಷದಿಂದ ಜೆರೆಮಿ ಕಾರ್ಬಿನ್ ಅವರಿಗೆ ತೀವ್ರ ಸ್ಪರ್ಧೆ ನೀಡಲಿದ್ದಾರೆ.
ಬ್ರಿಟನ್ ನಲ್ಲಿ ೬೫೦ ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಯಾವುದೇ ಪಕ್ಷ ಆಡಳಿತ ರಚಿಸಲು ೩೨೬ ಸ್ಥಾನಗಳ ಗೆಲವು ಪಡೆಯಬೇಕು. ಇತ್ತೀಚೆಗೆ ಲಂಡನ್ ಮ್ಯಾಂಚೆಸ್ಟರ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ನಂತರ ಇಲ್ಲಿನ ರಾಜಕೀಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎನ್ನಲಾಗುತ್ತಿದೆ. ಇಲ್ಲಿ ಭಯೋತ್ಪಾದನಾ ದಾಳಿಯೇ ಒಂದು ಬಹುದೊಡ್ಡ ರಾಜಕೀಯ ವಿಷಯವಾಗಿ ಮಾರ್ಪಟ್ಟಿದೆ.
ವಿವಿಧ ಪಕ್ಷಗಳಿಂದ ಭಾರತೀಯ ಮೂಲದ ೫೬ ಅಭ್ಯರ್ಥಿಗಳ ಈ ಚುನಾವಣೆ ಎದುರಿಸಲಿದ್ದು. ೨೦೧೫ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಮೂಲದ ೧೦ ಮಂದಿ ಎಲೆಕ್ಷನ್ ನಲ್ಲಿ ಜಯ ಗಳಿಸಿ, ಸಂಸತ್ತಿಗೆ ಆಯ್ಕೆಯಾಗಿದ್ದರು.
Comments