ಕಪಿಲ್ ಮಿಶ್ರಾಗೆ 'Y' ಕೆಟಗರಿ ಭದ್ರತೆ
ನವದೆಹಲಿ: ದೆಹಲಿ ಸರ್ಕಾರದ ಮಾಜಿ ಸಚಿವ ಕಪಿಲ್ ಮಿಶ್ರಾಗೆ 'Y' ಶ್ರೇಣಿಯ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಕಪಿಲ್ ಮಿಶ್ರಾ ಅರವಿಂದ ಕೇಜ್ರಿವಾಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಕಳೆದ ತಿಂಗಳು ಮಿಶ್ರಾ ಫಾಸ್ಟಿಂಗ್ ನಲ್ಲಿದ್ದರು. ಏಕಾ ಏಕಿ ನುಗ್ಗಿದ ವ್ಯಕ್ತಿಯೊಬ್ಬ ತಾನೊಬ್ಬ ಆಪ್ ಕಾರ್ಯಕರ್ತನೆಂದು ಹೇಳಿಕೊಂಡು ಮನೆಯೊಳಗೆ ನುಗ್ಗಿ ಕಪಿಲ್ ಮಿಶ್ರಾ ಮೇಲೆ ಹಲ್ಲೆಗೆ ಯತ್ನಿಸಿದ್ದ.
ಮೂಲಗಳ ಪ್ರಕಾರ ಕಪಿಲ್ ಮಿಶ್ರಾ ಅವರಿಗೆ ಜೀವ ಬೆದರಿಕೆ ಹಿನ್ನಲೆಯಲ್ಲಿ ಮತ್ತಷ್ಟು ನಿಗಾ ಇಡಲು ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಆಮ್ ಆದ್ಮಿ ಪಕ್ಷದ ವಿರುದ್ಧ ಆರೋಪ ಮಾಡಿದ್ದ ದೆಹಲಿ ಪದಚ್ಯುತ ಸಚಿವ ಕಪಿಲ್ ಮಿಶ್ರಾ ಈ ಹಿಂದೆ ಅನಿರ್ದಿಷ್ಟ ಅವಧಿ ಉಪವಾಸ ಕೈಗೊಂಡಿದ್ದರು.
ಆಮ್ ಆದ್ಮಿ ಪಕ್ಷವು ಸ್ವಿಕರಿಸಿದ ವಿದೇಶಿ ದೇಣಿಗೆಯ ಮೂಲಗಳ ಮಾಹಿತಿ ಬಹಿರಂಗ ಪಡಿಸಬೇಕು ಎಂದು ಹೇಳಿದ್ದರು. ವಿದೇಶಿ ನಿಧಿ ಸಂಗ್ರಹವಾದ ವಿವರವನ್ನು ಈವರೆಗೆ ಪಕ್ಷ ಏಕೆ ಬಹಿರಂಗಪಡಿಸಿಲ್ಲ ಎಂದು ಮಿಶ್ರಾ ಈ ಹಿಂದೆ ಪ್ರಶ್ನಿಸಿದ್ದರು.
Comments