ಜುಲೈ ೧೭ಕ್ಕೆ ರಾಷ್ಟ್ರಪತಿ ಎಲೆಕ್ಷನ್
ನವದೆಹಲಿ: ಕೇಂದ್ರ ಚುನಾವಣೆ ಆಯೋಗ ಮುಂದಿನ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಿಸಿದೆ. ಚುನಾವಣೆ ಆಯೋಗದ ಆಯುಕ್ತ ನಸೀಮ್ ಝೈದಿ ಮಾಧ್ಯಮಗೋಷ್ಠಿ ನಡೆಸಿದ್ರು, ಬರುವ ಜುಲೈ ೧೭ರಂದು ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಜುಲೈ ೨೦ ರಂದು ಮತ ಎಣಿಕೆ ನಡೆಯಲಿದೆ.
ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಿರುಸಿನ ಚಟುವಟಿಕೆ ನಡೆಸುತ್ತಿವೆ. ಪ್ರಸ್ತುತ ರಾಷ್ಟ್ಪಪತಿಯಾಗಿರುವ ಪ್ರಣಬ್ ಮುಖರ್ಜಿ ಅಧಿಕಾರ ಅವಧಿ ಜುಲೈ ೨೪ರಂದು ಮುಕ್ತಾಯಗೊಳ್ಳಲಿದೆ.ಜೂನ್ ೨೮ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ.
ರಾಷ್ಟ್ರಪತಿ ಅಭ್ಯರ್ಥಿ ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ , ದ್ರೌಪದಿ ಮುರ್ಮು ಹೆಸರು ರೇಸ್ ನಲ್ಲಿದೆ. ವಿಪಕ್ಷಗಳಿಂದ ಗೋಪಾಲ ಕೃಷ್ಣ ಗಾಂಧಿ, ಮೀರಾ ಕುಮಾರ್ ಹೆಸರು ಕೇಳಿ ಬರುತ್ತಿದೆ.
Comments