ಇದು ಡಿಜಿಟಲ್ ಇಂಡಿಯಾ.! ಕರೆ ಮಾಡಲು ಮರ ಹತ್ತಿದ್ರು ಸಚಿವರು

ಜಯಪೂರಾ: ಡಿಜಿಟಲ್ ಇಂಡಿಯಾದ ಹವಾ ಎಲ್ಲೆಡೆ ಇದೆ. ಆದ್ರೆ ಸತ್ಯವೆನೆಂದರೆ ಡಿಜಿಟಲ್ ರಿಯಾಲಿಟಿ ಹೇಗಿದೆ ಎಂದು ಕೇಂದ್ರ ಸಚಿವರೊಬ್ಬರಿಂದ ಇದೀಗ ತಿಳಿದು ಬಂದಿದೆ.
ರಾಜಸ್ಥಾನದ ಬಿಕಾನೇರ್ ಜಿಲ್ಲೆಯಿಂದ ೧೨ ಕಿ.ಮೀ ದೂರದಲ್ಲಿರುವ ದೋಲಿಯಾ ಗ್ರಾಮಕ್ಕೆ ಭೇಟಿ ನೀಡಿದ್ದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ನೆಟ್ ವರ್ಕ್ ಸಿಗದೇ ಹೋದಾಗ ಮೊಬೈಲ್ ನಲ್ಲಿ ಮಾತನಾಡಲು ಮರ ಹತ್ತಿದ ಘಟನೆ ನಡೆದಿದೆ.
ಗ್ರಾಮದ ಸಮಸ್ಯೆಗಳನ್ನು ಆಲಿಸಿದ ಅವರು, ಗ್ರಾಮದಲ್ಲಿ ಸಾಕಷ್ಟು ಸಮಸ್ಯೆ ಇದೆ. ಆದರೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದರು.
ಪ್ರತಿ ದಿನ ನಾವು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮೊಬೈಲ್ ನೆಟ್ ವರ್ಕ್ ಸಿಗಬೇಕಾದರೆ ಮರ ಹತ್ತಬೇಕು ಎಂದು ಸ್ಥಳೀಯರು ಹೇಳಿದಾಗ, ಸಚಿವರಿಗೆ ಬೇರೆ ದಾರಿ ಇರಲಿಲ್ಲ. ಅಲ್ಲಿನ ಗ್ರಾಮಸ್ಥರು ಏಣಿ ತಂದು ಕೊಟ್ಟು, ಏಣಿ ಮೂಲಕ ಸಚಿವರು ಮರ ಹತ್ತಿದ್ದರು. ಈ ಮೂಲಕ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ.
Comments