ರೈತರ ಸಾಲ ಮನ್ನಾ, ಜೂ.೧೦ರಂದು ಪ್ರೊಟೆಸ್ಟ್
ಬೆಂಗಳೂರು: ರೈತರ ಸಾಲಮನ್ನಾ ಮಾಡಿ, ಇಲ್ಲ ಮನೆಗೆ ನಡೆಯಿರಿ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಕೆ.ಆರ್ ಪುರಂ ನ ಖಾಸಗಿ ಹೊಟೇಲ್ ನಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದ ಜಲಾಶಯಗಳು ಬತ್ತಿ ಹೋಗಿವೆ, ಬರಗಾಲ ಎಲ್ಲಾ ಕಡೆ ಇದೆ. ಇದು ಸಿದ್ದರಾಮಯ್ಯ ಕಾಲಿಟ್ಟ ದಿನದಿಂದ ಸಮಸ್ಯೆ ಶುರುವಾಗಿದೆ, ಪಾಪ, ಸಿದ್ದರಾಮಯ್ಯನವರ ಕಾಲ್ಗುಣ ಅನ್ನಿಸುತ್ತದೆ ಎಂದು ಸಿಎಂ ವಿರುದ್ಧ ವ್ಯಂಗ್ಯವಾಡಿದರು.
ಜೂ.೧೦ ರಂದು ಫ್ರೀಡಂ ಪಾರ್ಕ್ ನಲ್ಲಿ ಒಂದು ಲಕ್ಷ ರೈತರನ್ನು ಸೇರಿಸಿ ಸಾಲಮನ್ನಾ ಕುರಿತು ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ನನ್ನ ಜೀವನಾಧಾರಿತ ಚಿತ್ರ ನಿರ್ಮಾಣವಿಲ್ಲ:
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಆಡಳಿತ ಚಲನಚಿತ್ರ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ತಮ್ಮ ಜೀವನ ಆಧಾರಿತ ಚಲನಚಿತ್ರ ನಿರ್ಮಾಣದ ಮಾತುಗಳು ಬರುತ್ತಿವೆ. ಆದರೆ ನನ್ನ ಚಿತ್ರ ನಿರ್ಮಾಣಕ್ಕೆ ನಾನು ಅನುಮತಿ ಕೊಟ್ಟಿಲ್ಲ. ನನ್ನ ಜೀವನ ಚರಿತ್ರೆ ಕುರಿತು ಚಿತ್ರ ನಿರ್ಮಾಣ ಬೇಕಿಲ್ಲ.ನನ್ನ ಹೆಸರಿನಲ್ಲಿ ಯಾವುದೇ ಚಿತ್ರ ನಿರ್ಮಾಣ ಬೇಡವೆಂದು ಹೇಳಿದ್ದೇನೆ. ಯಾರು ಚಿತ್ರ ನಿರ್ಮಾಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
Comments