ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್...
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ಗೆ ಭೇಟಿ ನೀಡಿ ರಾಮಜನ್ಮ ಭೂಮಿಗೆ ಪೂಜೆ ಸಲ್ಲಿಸಲಿದ್ದಾರೆ. ೧೯೯೨ರ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತಿರುವ ಉತ್ತರಪ್ರದೇಶದ ಮೊದಲ ಮುಖ್ಯ ಮಂತ್ರಿಯಾಗಿರಲಿದ್ದಾರೆ ಯೋಗಿ ಆದಿತ್ಯನಾಥ್.
ಅಯೋಧ್ಯೆಯಲ್ಲಿರುವ ವಿವಾದಿತ ಬಾಬ್ರಿ ಮಸೀದಿ ಸಂಚು ಹೂಡಿದ ಪ್ರಕರಣದಲ್ಲಿ ಬಿಜೆಪಿ ವರಿಷ್ಠ ಎಲ್ ಕೆ ಅಡ್ವಾಣಿ ಹಾಗೂ ಇತರರ ವಿರುದ್ಧ ಕೋರ್ಟ್ ಆರೋಪ ಪಡಿಸಿದ ಮರುದಿನವೇ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ತೆರಳಿದ್ದಾರೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ರಾಮ್ ಲಾಲ್ ದೇವಾಲಯ ಹಾಗೂ ಹನುಮಾನ ದೇವಸ್ಥಾನಕ್ಕೆ ತೆರಳಿ ಸಿಎಂ ಯೋಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನಿನ್ನೆ ಲಕ್ನೋ ಕೋರ್ಟ್ ಎಲ್.ಕೆ ಅಡ್ವಾಣಿ, ಸಚಿವೆ ಉಮಾ ಭಾರತಿ ಹಾಗೂ ಮತ್ತಿರರನ್ನು ವಿಚಾರಣೆ ನಡೆಸಿತ್ತು. ಬಾಬ್ರಿ ಮಸೀದಿ ಧ್ವಂಸ ಸಂಚು ಹೂಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪ ನಿಗದಿಪಡಿಸಿತ್ತು.
Comments