ಪ್ರಧಾನಿ ನರೇಂದ್ರ ಮೋದಿ ಗೆ ಹೆಚ್ಡಿಕೆ ಹಾಕಿರುವ ಸವಾಲೇನು..?
ಅಧಿಕಾರಕ್ಕೆ ಬಂದ್ರೆ ದೇವೇಗೌಡರಿಂದ ಸಿದ್ದರಾಮಯ್ಯ ವರೆಗಿನ ಸರ್ಕಾರಗಳ ತೀರ್ಮಾನಗಳು ತನಿಖೆ ಮಾಡ್ತೇನೆ
ದೇಶದ ಪ್ರಧಾನಿಗಳಿಗೆ ಕೈ ಜೋಡಿಸಿ ಮನವಿ ಮಾಡ್ತೀನಿ ನನ್ನ ರಾಜ್ಯದ ರೈತರು ಸಂಕಷ್ಟ ದಲ್ಲಿ ಇದ್ದಾರೆ. ಬಿಜೆಪಿ ನಾಯಕರು ನನ್ನ ಮೇಲೆ ಇಪ್ಪತ್ತು ಸಾವಿರ ಕೋಟಿ ಬೇನಾಮಿ ಆಸ್ತಿ ಆರೋಪ ಮಾಡಿದ್ದಾರೋ ಆ ಆಸ್ತಿಯನ್ನು ಕಂಡು ಹಿಡಿದು ನನ್ನ ರೈತರ ಸಾಲ ಮನ್ನಾ ಮಾಡಿ. ರೈತರ ಸಾಲ ಮನ್ನಾ ಮಾಡಲು ಖಜಾನೆಯಲ್ಲಿ ಹಣ ಇಲ್ಲ ಎನ್ನುತ್ತಿದ್ದೀರಿ. ಹಾಗಾಗಿ ಈ ಬೇನಾಮಿ ಆಸ್ತಿ ಕಂಡು ಹಿಡಿದು ಆ ಹಣ ಬಳಸಿಕೊಳ್ಳಿ ಅಂತ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು..
ನನ್ನ ಬೇನಾಮಿ ಆಸ್ತಿ, ವಿದೇಶಿ ಬ್ಯಾಂಕಿನ ಹಣ ರೈತರಿಗೆ ಕೊಟ್ಬಿಡ್ತೇನೆ. ಖಾಲಿ ಪೇಪರ್ ಮೇಲೆ ಹಾಗಂತ ಸಹಿ ಮಾಡಿಕೊಡ್ತೇನೆ. ನಾನು ಬೇನಾಮಿ ಆಸ್ತಿ ಮಾಡಿದ್ರೆ ಅದೆಲ್ಲ ರೈತರಿಗೆ ಸೇರಲಿ. ನನ್ನ ಇಮೇಜ್ ಹಾಳು ಮಾಡಲು ಇಂತಹ ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ತುಳಿಯಲು ಹೊರಟಿದ್ದಾರೆ ಅಂತ ಎಚ್.ಡಿಕೆ ಸವಾಲು ಹಾಕಿದ್ರು.
ದೇವೇಗೌಡರು ಸಿಎಂ ಆಗಿದ್ದಾಗಿನಿಂದ ಈಗಿನವರೆಗೆ ಸಾಕಷ್ಟು ಸರಕಾರಿ ತೀರ್ಮಾನಗಳಾಗಿವೆ. ಈ ಸರಕಾರಿ ನಿರ್ಧಾರಗಳನ್ನೆಲ್ಲ ತನಿಖೆಗೆ ಒಳಪಡಿಸ್ತೇನೆ. ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಈ ಸಂಬಂಧ ನಿಸ್ಪಕ್ಷಪಾತ ತನಿಖೆ ಮಾಡಿಸ್ತೇವೆ. ನನ್ನ ವಿರುದ್ಧ ಇನ್ನೂ ಹತ್ತು ದೂರು ಹಾಕಲಿ ಎಲ್ಲವನ್ನೂ ನಾನು ಎದುರಿಸುತ್ತೇನೆ. ನನ್ನ ಪರ ಇರುವ ವಕೀಲರು ದೂರುಗಳ ವಿಚಾರ ನೋಡಿಕೊಳ್ತಾರೆ. ನಾನು ವಿಚಾರಣೆಗಳಿಗೂ ಹಾಜರಾಗ್ತೇನೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ.
Comments