ಕೈ ಸಾಲ ಮನ್ನ ಮಾಡಲಿದೆ ರಾಜ್ಯ ಸರ್ಕಾರ!: ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಕೈ ಸಾಲವನ್ನೂ ಇನ್ನು ಮುಂದೆ ಪರಿಹಾರಕ್ಕೆ ಪರಿಗಣಿಸುವಂತೆ ಸಿಎಂ ಸೂಚಿಸಿದ್ದಾರೆ
ಕೈ ಸಾಲ ಪಡೆದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೂ ಇನ್ಮೇಲೆ ರಾಜ್ಯ ಸರ್ಕಾರ ಪರಿಹಾರ ಕೊಡಲು ತೀರ್ಮಾನಿಸಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಈ ವಿಷಯವನ್ನ ಹೇಳಿದ್ದಾರೆ. ಆದರೆ ಇದನ್ನು ಯಾವ ಮಾನದಂಡದ ಮೇಲೆ ಅಳೆಯುತ್ತಾರೆ ಎಂಬುದು ಪ್ರಶ್ನೆಯಾಗಿದೆ.
ಮೈಸೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೈಸಾಲ ಮಾಡಿ ತೀರಿಸಲಾಗದ ರೈತರ ಕುಟುಂಬಗಳಿಗೂ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈವರೆಗೆ ಬ್ಯಾಂಕ್ ಸಾಲ ಪಡೆದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿತ್ತು.
ಕೈ ಸಾಲವನ್ನೂ ಇನ್ನು ಮುಂದೆ ಪರಿಹಾರಕ್ಕೆ ಪರಿಗಣಿಸುವಂತೆ ಸಿಎಂ ಸೂಚಿಸಿದ್ದಾರೆ. ಆದ್ರೆ ಅಧಿಕಾರಿಗಳ ವಿಭಾಗ ಮಟ್ಟದ ಸಮಾವೇಶದಲ್ಲಿ ಸಿಎಂ ನೀಡಿರುವ ಆದೇಶ ಪಾಲನೆಗೆ ಸೂಕ್ತವೇ ಎಂಬ ಪ್ರಶ್ನೆ ಅಧಿಕಾರಿಗಳನ್ನ ಕಾಡುತ್ತಿದೆ.
ಒಟ್ನಲ್ಲಿ ಸಿಎಂ ಹೇಳಿದಂತೆ ಕೈ ಸಾಲದಿಂದ ಸತ್ತವರಿಗೂ ಪರಿಹಾರ ಕೊಡುವುದಾದರೆ ಕೈ ಸಾಲ ಇಂತಿಷ್ಟೇ ಎಂದು ಹೇಗೆ ಗುರುತಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ.
Comments