ಈ ಟಿಪ್ಸ್ ಪಾಲಿಸಿ ಎರಡೇ ದಿನದಲ್ಲಿ  ಡಾರ್ಕ್ ಸರ್ಕಲ್ ಗೆ ಹೇಳಿ ಗುಡ್ ಬೈ..

09 Apr 2019 2:07 PM | Health
4028 Report

 ಸೂರ್ಯ ಕಿರಣ, ಒತ್ತಡ, ನಿದ್ರೆ ಕೊರತೆ,ಕೆಟ್ಟ ಆಹಾರ ಪದ್ಧತಿಯಿಂದ ಕಣ್ಣಿನ ಸುತ್ತಾ ಕಪ್ಪು ವರ್ತುಲ ಸೃಷ್ಟಿಯಾಗುತ್ತದೆ. ಇದರಿಂದ ಮುಖದ ಚರ್ಮ ವಯಸ್ಸಾದಂತೇ ಕಾಣುತ್ತದೆ. ಮುಖದ ಸೌಂದರ್ಯ ಕುಂದುತ್ತದೆ. ಆದರೆ ಈ ಕಪ್ಪು ಕಲೆಯನ್ನು ಹೋಗಲಾಡಿಸಲು ಅನೇಕ ಹೆಣ್ಣು ಮಕ್ಕಳು ಪಾರ್ಲರ್ ಮೊರೆ ಹೋಗುತ್ತಾರೆ. ಮಾರ್ಕೆಟ್ ನಲ್ಲಿ ಸಿಗೋ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ ಯಾವ ಪರಿಹಾರವೂ ಸಿಗದೇ ಹತಾಶರಾಗುತ್ತಾರೆ. ಚಿಂತೆ ಬಿಡಿ, ನಿಮ್ಮ ಮನೆಯಲ್ಲಿ ಸಿಗೋ ವಸ್ತುಗಳಿಂದ ಎರಡೇ ದಿನಗಳಲ್ಲಿ ಶಮನವಾಗುವ ಕಪ್ಪು ಕಲೆಗೆ ನಾವು ಕೊಡುತ್ತಿದ್ದೀವಿ ಸುಲಭ ಟಿಪ್ಸ್. ವರ್ಷಾನುಗಟ್ಟಲೇ ಕಾಡುವ ಕಣ್ಣಿನ ಸುತ್ತಾ ಇರುವ ಕಪ್ಪು ಕಲೆಗೆ ಎರಡೇ ಎರಡು ದಿನಗಳಲ್ಲಿ ಮಾಯವಾಗುತ್ತದೆ.

ಕಣ್ಣಿನ ಕೆಳಗೆ ಇದ್ದ ಕಪ್ಪು ಕಲೆ ಎರಡೇ ದಿನದಲ್ಲಿ ಮಂಗಮಾಯವಾಗೋಕೆ ಈ ಟಿಪ್ಸ್ ಪಾಲಿಸಿ.....

  1. ರೋಸ್ ವಾಟರ್ : ಪ್ರತೀ ದಿನ ಕಣ್ಣಿನ ಕೆಳ ಭಾಗಕ್ಕೆ ರೋಸ್ ವಾಟರ್ ಅನ್ನು ಹತ್ತಿಯ ಸಹಾಯದಿಂದ ಹಚ್ಚಬೇಕು. ಹತ್ತು ನಿಮಿಷ ಬಿಟ್ಟು ಕಣ್ಣು ಸ್ವಚ್ಛ ಮಾಡಿಕೊಳ್ಳಿ ಇದರಿಂದ ಕಣ್ಣು ಫ್ರೆಶ್ ಆಗಿ ಕಾಣುವುದಲ್ಲದೇ ಕಣ್ಣಿನ ಸುತ್ತಾ ಇರುವ ಕಪ್ಪು ಕಲೆ ಹೋಗುತ್ತದೆ. ಇದನ್ನು ಒಂದೆರಡು ದಿನ ಮಾಡುತ್ತಾ ಬಂದರೇ  ಎರಡೇ ದಿನದಲ್ಲಿ ನಿಮಗೆ ಫಲಿತಾಂಶ ಸಿಗುತ್ತದೆ.                                                                                                                                                                                                                                                                                

   2.ಟೀ ಪುಡಿ : ಟೀ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಅ ನಂತರ ಕುದಿಸಿದ ನೀರನ್ನು ಹತ್ತಿಯ ಸಹಾಯದಿಂದ ಕಣ್ಣಿನ ಕೆಳ ಭಾಗಕ್ಕೆ  ಹಚ್ಚಿ.  15 ನಿಮಿಷ ಅದನ್ನು ಒಣಗಲು ಬಿಡಿ.  ಆ ನಂತರ ತೊಳೆಯಿರಿ. ಮೂರು ದಿನಗಳ ಕಾಲ ಹೀಗೆ ಮಾಡಿದ್ರೆ ಖಂಡಿತಾ ನಿಮ್ಮ ಕಣ್ಣಿನ ಸುತ್ತಾ ಇರುವ ಕಪ್ಪು ಕಲೆ ಮಂಗಮಾಯವಾಗುತ್ತದೆ.

 

Related image

  1. ಬಾದಾಮಿ ಎಣ್ಣೆ : ಬಾದಾಮಿ ಎಣ್ಣೆಯನ್ನು ನಿಮ್ಮ ಕಣ್ಣಿನ ಸುತ್ತಾ 20 ನಿಮಿಷ  ಹಚ್ಚಿಕೊಳ್ಳಿ. ಐದು ನಿಮಿಷ ಕಣ್ಣನ್ನು ಮಸಾಜ್ ಮಾಡಿ. ಆ ನಂತರ ಸ್ವಚ್ಛ ಮಾಡಿಕೊಳ್ಳಿ. ಪ್ರತೀ ದಿನ ಹೀಗೆ ಮಾಡುವುದರಿಂದ ಖಂಡಿತಾ ನಿಮ್ಮ ಖನ್ಣಿನ ಸುತ್ತಾ ಇರುವ ಕಪ್ಪು ಕಲೆ ನಿವಾರಣೆಯಾಗುತ್ತದೆ.                                                                                                                                           Image result for dark circle under eye                                                                                                                           
  2. ಪುದಿನಾ : ಪುದಿನಾ ಎಲೆಗಳನ್ನು ರುಬ್ಬಿ ಅದನ್ನು ಕಣ್ಣಿನ  ಲೇಪನ ಮಾಡಿಕೊಳ್ಳಿ. ಅದನ್ನು ಹಚ್ಚಿಕೊಂಡು 10 ನಿಮಿಷ ಆರಾಮಾಗಿ ನಿದ್ದೆ ಮಾಡಿ. ಒಂದು ವಾರಗಳ ಕಾಲ ಹೀಗೆ ಮಾಡಿದ್ರೆ ನಿಮ್ಮ ಕಣ್ಣಿನ ಸುತ್ತಾ ಇರುವ ಕಪ್ಪು ಕಲೆ ಹೇಗೆ ಹೋಗುತ್ತದೆ ಎಂದು ನೀವೆ ನೋಡಿ.

Edited By

Kavya shree

Reported By

Kavya shree

Comments