ನಿಮ್ಮ ಹೊಟ್ಟೆ ಸುತ್ತಾ ಇರುವ ಬೊಜ್ಜು ಕರಗಬೇಕೆ : ಇಲ್ಲಿದೆ ಸಿಂಪಲ್ ಟಿಪ್ಸ್.......
ಸಣ್ಣದಾಗಿ, ಬಳಕೋ ಬಳ್ಳಿಯಂತೆ ಇರಬೇಕು ಹುಡುಗಿಯರು ಎಂಬ ಮಾತಿದೆ. ಎಷ್ಟೋ ಹೆಣ್ಣು ಮಕ್ಕಳು ತಮ್ಮ ದೇಹದ ಬೊಜ್ಜು ಕರಗಿಸಲು ಬಹಳವೇ ಕಸರತ್ತು ನಡೆಸುತ್ತಾರೆ. ಆದರೆ ಏನೇ ಡಯೆಟ್ ಮಾಡಿದ್ರು ಸೊಂಟದ ಸುತ್ತಾ ಇರುವ ಹಠಮಾರಿ ಬೊಜ್ಜನ್ನು ಕರಗಿಸಲು ಆಗುತ್ತಿಲ್ಲವೇ,..? ಯೋಚನೆ ಮಾಡಬೇಡಿ. ನಾವ್ ಹೇಳೋ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಖಂಡಿತ ನೀವು ಸುಂದರವಾಗಿ ಕಾಣೋದ್ರಲ್ಲಿ ಡೌಟೇ ಇಲ್ಲ.ಬೊಜ್ಜು ಇದೆ ಅಂದ್ರೆ ಅದಕ್ಕೆ ಕಾರಣ ಅನಿಯಮಿತ ಆಹಾರ ಪದ್ಧತಿ, ಸಕ್ಕರೆ ಅತಿಯಾಗಿ ಸೇವಿಸುವುದರಿಂದ ಕೊಬ್ಬಿನಾಂಶ ದೇಹದಲ್ಲಿ ಹೆಚ್ಚಾಗಿ ಸೇರ್ಪಡೆಯಾಗುತ್ತದೆ. ಡೋಟ್ ವರಿ ಈ ಟಿಪ್ಸ್ ನೋಡಿ.
- ನಿಮ್ಮ ಸೇವಿಸುವ ಆಹಾರದಲ್ಲಿ ಫೈಬರ್ ಇರಲಿ : ನಿಮ್ಮ ಸೊಂಟದ ಸುತ್ತಾ ಇರುವ ಕೊಬ್ಬನ್ನು ಕರಗಿಸಲು ಸಿಂಪಲ್ ಟಿಪ್ಸ್ ಇದು. ಏನಿಲ್ಲಾ.. ಫೈಬರ್ ಸಹ ಒಂದು ಪೌಷ್ಠಿಕಾಂಶವಾಗಿದ್ದು , ನೀವು ತಿನ್ನುವ ಆಹಾರದಲ್ಲಿ ಬಹಳಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ
- ಸಾಕಷ್ಟು ನೀರು ಕುಡಿಯಿರಿ: ನೀರು ದೇಹಕ್ಕೆ ಹೆಚ್ಚಾಗಿಯೇ ಬೇಕು. ಚರ್ಮದ ಕಾಯಿಲೆಗಳನ್ನು ಶಮನ ಮಾಡುವ ಶಕ್ತಿ ನೀರಿಗಿದೆ. ಅಷ್ಟೇ ಅಲ್ಲಾ…ಹೆಚ್ಚಾಗಿ ನೀರು ಕುಡಿಯುವುದು ಮತ್ತು ಇತರ ಆರೋಗ್ಯಕರ ಪಾನೀಯಗಳು ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಜೀರ್ಣಕ್ರಿಯೆಯನ್ನ ಹೆಚ್ಚಿಸಿ, ಮೆಟಾಬಾಲಿಸಂ ಹೆಚ್ಚಿಸುತ್ತದೆ. ನೀರಿನಾಂಶ ಇರುವ ಪದಾರ್ಥಗಳನ್ನು ಹೆಚ್ಚು ಸೇವಿಸ ಬೇಕು. ಅದರಲ್ಲೂ ಹಣ್ಣಿನ ಪದಾರ್ಥಗಳು ಸೇವಿಸುವುದರಿಂದ ಕೊಬ್ಬಿನಾಂಶ ಕಡಿಮೆಯಾಗುತ್ತದೆ.
- ಸಾಕಷ್ಟು ನಿದ್ರೆ: ನಿದ್ದೆಯಿಲ್ಲದೇ ಕೆಲಸ ಮಾಡುವುದು ಕೂಡ ದೇಹದಲ್ಲಿ ಕೊಬ್ಬು ಹೆಚ್ಚು ಸಂಗ್ರಹವಾಗಲು ಕಾರಣವಾಗುತ್ತದೆ.ಇದರ ಜೊತೆಗೆ ಒತ್ತಡವನ್ನ ಕಡಿಮೆ ಮಾಡಿಕೊಳ್ಳಿ. ಇದು ನಿಮಗೆ ಉತ್ತಮ ಆರೋಗ್ಯವನ್ನ ಒದಗಿಸುತ್ತದೆ.
- ಸಾಕಷ್ಟು ಪ್ರೋಟೀನ್ ಆಹಾರಗಳನ್ನ ಸೇವಿಸಿ: ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರಗಳು ಹಾಗೂ ಪ್ರೋಟೀನ್ಗಳು ಇರುವ ಆಹಾರವನ್ನ ಹೆಚ್ಚು ಸೇವಿಸಿ. ಇದು ಹೊಟ್ಟೆ ಕೊಬ್ಬನ್ನು ಕರಗಿಸಲು ಬಹಳ ಪ್ರಯೋಜನಕಾರಿ. ಯಾಕೆಂದ್ರೆ ಪ್ರೋಟೀನ್ ಜೀರ್ಣಕ್ರಿಯೆಯನ್ನ ಹೆಚ್ಚಿಸಲು ಸಹಾಯ ಮಾಡುತ್ತವೆ ಮತ್ತು ಅತಿಯಾಗಿ ಊಟ ಮಾಡುವುದನ್ನ ತಡೆಯುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಚಿಕನ್, ಮೊಟ್ಟೆ, ಮೀನು, ಕಾಟೇಜ್ ಚೀಸ್, ಮತ್ತು ನಟ್ಸ್ಗಳಂತ ಆಹಾರವನ್ನ ಹೆಚ್ಚಾಗಿ ಸೇವಿಸಿ.
- ಜಂಕ್ ಫುಡ್ನಿಂದ ದೂರವಿರಿ:ಇತ್ತೀಚೆಗೆ ಜಂಕ್ ಫುಡ್ ಸೇವಿಸುವವರ ಸಂಖ್ಯೆ ಅತಿಯಾಗಿದೆ. ಸಮಯದ ಉಳಿತಾಯದಿಂದ, ನಾಲಿಗೆ ರುಚಿಗಾಗಿ ಜಂಕ್ ಫುಡ್ ಗಳನ್ನು ಸೇವಿಸುತ್ತಾರೆ. ಈ ಪದಾರ್ಥಗಳು ಸರಿಯಾಗಿ ಜೀರ್ಣವಾಗಲ್ಲ. ಹಾಗಾಗಿಯೇ ಕೊಬ್ಬು ಸಂಗ್ರವಾಗುತ್ತದೆ. ತಿನ್ನುವುದನ್ನು ಬಿಟ್ಟರೆ ಅತಿಯಾದ ದೇಹ ತೂಕ ಕಡಿಮೆಯಾಗುತ್ತದೆ.
- ಸಂಸ್ಕರಿಸದ ಪದಾರ್ಥಗಳನ್ನು ಬ್ಯಾನ್ ಮಾಡಿ : ಹೌದು …ಅದೆಷ್ಟೋ ದಿನಗಳಿಂದ ರೆಫ್ರಿಜರೇಟರ್ನಲ್ಲಿಟ್ಟು ತಿನ್ನುವುದು ಮಹಾ ಡೇಂಜರ್. ಆ ತಿನಿಸುಗಳನ್ನು ತಿಂದರೆ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಅದು ಸೊಂಟದ ಕೆಳಗೆ ಬೇಡವಾದ ಬೊಜ್ಜು ಸಂಗ್ರಹವಾಗುತ್ತಾ ಹೋಗುತ್ತದೆ. ಇದನ್ನು ಬಿಟ್ಟು ತರಕಾರಿ, ಸೊಪ್ಪು, ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಹೇರಳವಾಗಿ ಉಪಯೋಗಿಸಿ ನೋಡಿ , ನೀವೇ ಜಾದು ಕಾಣುವಿರಿ ಅಷ್ಟೇ ಅಲ್ಲದೇ ನಿಮ್ಮ ದೇಹ ಫ್ಲೆಕ್ಸಿಬಲ್ ಆಗಿ ಇರೋದಿಕ್ಕೆ ಇದು ಬೆಸ್ಟ್ ಆಪ್ಶನ್.
Comments