ಡೋಂಟ್ ಫರ್ಗೆಟ್..!! ಸಮ್ಮರ್’ನಲ್ಲಿ ಈ ವಸ್ತುಗಳು ನಿಮ್ಮ ಬಳಿ ಇರಲೇಬೇಕು..!!

27 Mar 2019 10:54 AM | Health
3429 Report

ಅಂತೂ ಇಂತೂ ಬೇಸಿಗೆ ಶುರುವಾಗೇ ಹೋಯ್ತು… ಮನೆಯಿಂದ ಹೊರಬರಬೇಕು ಅಂದ್ರೆ ನೂರು ಬಾರಿ ಯೋಚನೆ ಮಾಡ್ತೀವಿ.. ಈ ಬಿಸಿಲಿನಲ್ಲಿ ಹೇಗಪ್ಪಾ ಹೋಗೋದು ಅಂತಾ.. ಅದರಲ್ಲೂ ಹೆಣ್ಣು ಮಕ್ಕಳಂತೂ ಇದರ ಬಗ್ಗೆ ಸಿಕ್ಕಾಪಟ್ಟೆ ಯೋಚನೆ ಮಾಡ್ತಾರೆ… ಅಯ್ಯೋ ಬಿಸಿಲಿನಲ್ಲಿ ಹೋದರೆ ಸ್ಕಿನ್ ಟ್ಯಾನ್ ಆಗಿಬಿಡುತ್ತೆ ಏನ್ ಮಾಡೋದು ಅಂತಾ ಯೋಚನೆ ಮಾಡಿ ಕೊನೆಗೆ ಮುಖ, ಕೈ ಕಾಲು ಎಲ್ಲಾ ಫುಲ್ ಪ್ಯಾಕ್ ಮಾಡ್ಕೊಂಡು ಹೊರಡುತ್ತಾರೆ.. ಆದರೆ ಬಿಸಿಲಿನಲ್ಲಿ ಹೊರಗಡೆ ಹೋಗುವಾಗ ಒಂದಿಷ್ಟು ವಸ್ತುಗಳುನ್ನು ಮಿಸ್ ಮಾಡ್ದೆ ತೆಗೆದುಕೊಂಡು ಹೋಗಿ.. ಯಾಕಂದ್ರೆ ಸಮ್ಮರ್ ನಲ್ಲಿ ನಿಮಗೆ ಈ ವಸ್ತುಗಳ ಅವಶ್ಯಕತೆ ತುಂಬಾ ಇರುತ್ತದೆ.. ಅರೇ ಯಾವುವು ಅಂತ ಯೋಚನೆ ಮಾಡುತ್ತಿದ್ದೀರಾ… ಮುಂದೆ ಓದಿ ನಿಮಗೆ ಗೊತ್ತಾಗುತ್ತೆ…

ಬೇಸಿಗೆ ಆರಂಭವಾಗಿದೆ ಸ್ವಲ್ಪ ಹೊತ್ತು ಸುತ್ತಾಡಿದರೆ ಸಾಕು ಸ್ಕಿನ್ ಟ್ಯಾನ್ ಆಗಿಬಿಡುತ್ತದೆ. ಕೆಲಸ ಮಾಡಲು ಹೊರಟರೆ ಪುಲ್ ಸುಸ್ತು…ಅತೀ ಬೇಗ ಆಯಾಸವಾಗಿ ಬಿಡುತ್ತದೆ... ಈ ಉಷ್ಣತೆಗೆ ಚರ್ಮದ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಾಗ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಹೊರ ಹೋಗುವಾಗ ಕೆಲವೊಂದು ವಸ್ತುಗಳನ್ನು ಹ್ಯಾಂಡ್ಬ್ಯಾಗಿನಲ್ಲಿರಿಸಿಕೊಂಡಾಗ ಅವು ಉಪಯೋಗಕ್ಕೆ ಬರಬಹುದು.

ವಾಟರ್ ಬಾಟಲ್ : ಬೇಸಿಗೆಯಲ್ಲಿ ಸೂರ್ಯನ ಶಾಖ ಹೆಚ್ಚಾಗಿರುತ್ತದೆ.. ಬೇಸಿಗೆಯಲ್ಲಿ ಪದೇ ಪದೇ ಬಾಯಾರಿಕೆಯಾಗುತ್ತಿರುತ್ತದೆ.. ಬಾಯಾರಿಕೆಯಾಗುತ್ತದೆ ಎಂದು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ನೀರು ಕುಡಿದರೆ ನಿಮ್ಮ ಆರೋಗ್ಯ ಹಾಳಾಗುತ್ತದೆ.. ಹಾಗಾಗಿ ಮನೆಯಿಂದ ಹೊರಗಡೆ ಹೋಗುತ್ತಿದ್ದರೆ ಬ್ಯಾಗ್ನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುವುದನ್ನು ಮರೆಯಬೇಡಿ..

ದುಪ್ಪಟ್ಟಾ ಹಾಗೂ ಛತ್ರಿ : ಬೇಸಿಗೆಯಲ್ಲಿ ಸೂರ್ಯನ ಬಿಸಿಲು ಹೆಚ್ಚಾಗಿರುವುದರಿಂದ ಆರೋಗ್ಯ ಹಾಗೂ ಸೌಂದರ್ಯ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ.. ಮನೆಯಿಂದ ಹೊರಗಡೆ ಹೋಗುವಾಗ ದುಪ್ಪಟ್ಟ ಮತ್ತು ಛತ್ರಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ... ದುಪ್ಪಟ್ಟದಿಂದ ನಿಮ್ಮ ಮುಖವನ್ನು ಮುಚ್ಚಿಕೊಳ್ಳಬಹುದು ಹಾಗೂ ಅತೀ ದೂರ ನಡೆಯಬೇಕಾದರೆ ಛತ್ರಿಯನ್ನು ಬಳಸುವುದು ಉತ್ತಮವಾಗಿರುತ್ತದೆ.

ಸುಗಂಧದ್ರವ್ಯ : ಬೇಸಿಗೆಯಲ್ಲಿ ಹೊರ ಹೋಗುವಾಗ ಬ್ಯಾಗಿನಲ್ಲಿ ಡಿಯೋಡ್ರೆಂಟ್‌ಅಥವಾ ಪಫ್ರ್ಯುಮ್‌ಇದ್ದರೆ ಒಳ್ಳೆಯದು.. ಯಾಕೆಂದರೆ ಬಿಸಿಲ ತಾಪಕ್ಕೆ ದೇಹವು ಬೆವರುವುದು ಸಾಮಾನ್ಯವಾಗಿರುತ್ತದೆ. ಬೆವರಿನಿಂದಾಗಿ ಕೆಟ್ಟವಾಸನೆ ಬರುವುದರಿಂದ ಸುಗಂಧದ್ರವ್ಯಗಳನ್ನು ಬಳಸುವುದರಿಂದ ಬೆವರುವುದು ಕೂಡ ಕಡಿಮೆ. ಅದಲ್ಲದೇ ಅತಿ ಹೆಚ್ಚಾಗಿ ಬೆವರಿ ದೇಹ ವಾಸನೆ ಬರುವುದಿಲ್ಲ.. ಬ್ಯಾಗಿನಲ್ಲಿದ್ದರೆ ಬೇಕೆನಿಸಿದಾಗ ಬಳಸಬಹುದು.

ಸನ್‌ಸ್ಕ್ರೀನ್‌ : ಸೂರ್ಯನ ಕಿರಣಗಳು ನೇರವಾಗಿ ನಮ್ಮ ಮೈ ಮೇಲೆ ಬಿದ್ದರೆ ಚರ್ಮ ಕಳೆಗುಂದುತ್ತದೆ..  ಪುರುಷರು ಹಾಗೂ ಮಹಿಳೆಯರು ಸನ್‌ಸ್ಕ್ರೀನ್‌ ಲೋಷನ್‌  ಚರ್ಮ ಹಾಳಾಗುವುದನ್ನು ತಪ್ಪಿಸಬಹುದು... ತುಟಿಯು ಕೋಮಲವಾಗಿರಬೇಕೆಂದರೆ ಲಿಪ್ ಗ್ಲಾಸ್ ಇಟ್ಟುಕೊಳ್ಳಿ. ಇವೆರಡನ್ನೂ ಬೇಕೆನಿಸಿದಾಗ ಬಳಸಬಹುದು. ಇದರಿಂದ ಚರ್ಮವನ್ನು ಕಾಪಾಡಿಕೊಳ್ಳಬಹುದು.

ಹಾಗಾಗಿ ನೀವು ಮನೆಯಿಂದ ಹೊರಗೆ ಹೋಗುವಾಗ ಈ ಮೇಲ್ಕಂಡ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ..

Edited By

Manjula M

Reported By

Manjula M

Comments