ಸನ್​ಬರ್ನ್​ ಸಮಸ್ಯೆಗೆ ಮನೆಯಲ್ಲಿಯೇ ಇದೆ ಸಿಂಪಲ್​ ರೆಮಿಡಿಸ್..!!

23 Feb 2019 4:58 PM | Health
4773 Report

ಅಯ್ಯೋ ದೇವರೆ ಇಷ್ಟು ದಿನ ಚಳಿ ಚಳಿ ಅಂತ ಮೈ ತುಂಬಾ ಸ್ವೇಟರ್ ಹಾಕಿಕೊಂಡು ಹೋಗ್ತಾ ಇದ್ದೋರು… ಈಗ ಅಯ್ಯೋ ದೇವರೆ ಇಷ್ಟೊಂದು ಬಿಸಿಲ ಅಂತಾ ಅಂದುಕೊಳ್ಳುತ್ತಿದ್ದಾರೆ..ಬೇಸಿಗೆ ಶುರುವಾಗುತ್ತಿದ್ದ ಹಾಗೆ ಎಲ್ಲರಿಗೂ ಒಂಥರಾ ಟೆನ್ಷನ್… ಹೊರಗಡೆ ಹೋಗೋದಕ್ಕೆ ಹಿಂದೆ ಮುಂದೆ ನೋಡ್ತಾರೆ. ಈ ಬಿಸಿಲಿನಲ್ಲಿ ಹೇಗಪ್ಪಾ ಹೋಗೋದು ಅಂತಾ ಒಂದು ಕ್ಷಣ ಯೋಚನೆ ಮಾಡ್ತಾರೆ..ಬಿಸಿಲಿನ ಬೇಗೆಗೆ ಮನೆ ಬಿಟ್ಟು ಹೊರ ಹೋಗೋಕೆ  ಭಯ ಆಗುತ್ತೆ . ನಾನೆಲ್ಲಿ ಟ್ಯಾನ್​ ಆಗೋಗ್ತಿನೋ, ಎಲ್ಲಿ ಕಪ್ಪು ಆಗೋಗ್ತೀನೋ ಅನ್ನೋದೆ ದೊಡ್ಡ ತಲೆನೋವಿನ ವಿಷಯ..  ಸೂರ್ಯನ ಕಿರಣಗಳು ನಮ್ಮ ತ್ವಚೆಯ ಮೇಲೆ ಬಿದ್ದರೆ ಸಾಕು, ಟ್ಯಾನ್​ ಆಗಲು ಶುರುವಾಗುತ್ತೆ. ಅದಕ್ಕಾಗಿ ಅಂತಾನೇ ನಾವು ಸಾಕಷ್ಟು ಸನ್​ ಸ್ಕ್ರೀನ್​ ಲೋಷನ್ ಗಳ ಮೊರೆ ಹೋಗುತ್ತೇವೆ… ಆದರೆ ನ್ಯಾಚುರಲ್ ಆಗಿಯೇ ಸಿಗುವ ಒಂದಿಷ್ಟು ಮನೆ ಮದ್ದುಗಳಿವೆ.. ನೋಟ್ ಮಾಡ್ಕೊಳ್ಳಿ…

ನಮ್ಮ ಚರ್ಮಕ್ಕೆ ಉಂಟಾಗುವ ಸಮಸ್ಯೆಗಳಲ್ಲಿ ಸನ್​ಬರ್ನ್​ ಕೂಡಾ ಒಂದು. ಸನ್​ಬರ್ನ್​​ ನಿಂದ ಮುಕ್ತಿ ಪಡೆಯಲು ಸನ್​ಸ್ಕ್ರೀನ್​ ಲೋಷನ್ ಬಳಸುತ್ತೀವಿ.. ಹೆಚ್ಚು ಸಮಯ ಸೂರ್ಯನ ಕಿರಣಗಳಿಗೆ ಮೈ ಒಡ್ಡಿದಾಗ ಚರ್ಮದಲ್ಲಿರುವ ಮೆಲನಿನ್ ಅನ್ನು ಉತ್ಪಾದಿಸಲು ಪ್ರಾರಂಭ ಮಾಡುತ್ತದೆ. ಸನ್​ಬರ್ನ್ಸ್​ಗಳನ್ನ ಹೇಗಪ್ಪಾ ಹೋಗಲಾಡಿಸೋದು ಅನ್ನೋ ಟೆನ್ಷನ್​ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ.. ಅದಕ್ಕಾಗಿ ಒಂದಿಷ್ಟು ಹೋಂ ರೆಮಿಡಿಸ್ ಇಲ್ಲಿದೆ.

ಕಲ್ಲಂಗಡಿ:

ಬೇಸಿಗೆ ಸಮಯದಲ್ಲಿ ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ತುಂಬಾನೇ ಇದೆ… ಹಾಗಾಗಿ ನೀರಿನ ಅಂಶ ಹೆಚ್ಚಾಗಿರುವ ಹಣ್ಣನ್ನು ತಿನ್ನಬೇಕು.. ಅಂತಹ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖ ಪಾತ್ರವನ್ನು ವಹಿಸುತ್ತದೆ.  ಕಲ್ಲಂಗಡಿಯಲ್ಲಿ ಗ್ಲುಟಾಥಿಯೋನ್ ಎಂಬ ಆ್ಯಂಟಿ ಆಕ್ಸಿಡೆಂಟ್​ ಅಂಶವಿದ್ದು, ಇದು ಮೆಲನಿನ್ ಉತ್ಪಾದನೆಯನ್ನ ನಿಯಂತ್ರಿಸುತ್ತದೆ. ಕಲ್ಲಂಗಡಿ ಹಣ್ಣಿನ ಪೇಸ್ಟನ್ನ ಟ್ಯಾನ್​ ಆದ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಸನ್​ಬರ್ನ್​​​ ನಿವಾರಣೆಯಾಗುತ್ತದೆ..

ಅರಿಶಿಣ: 

ಹಿಂದಿನ ಕಾಲದಿಂದಲೂ ಕೂಡ ಅರಿಶಿಣವನ್ನು ಚರ್ಮದ ಆರೈಕೆಗಾಗಿ ಬಳಸುತ್ತಾರೆ.. ಅರಿಶಿಣದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶವು ಮೆಲಾನಿನ್ ಉತ್ಪಾದನೆಯನ್ನು ತಡೆಗಟ್ಟುತ್ತದೆ... ಅರಿಶಿಣದ ಪುಡಿಗೆ ಮೊಸರು ಮತ್ತು ನೀರನ್ನು ಸೇರಿಸಿ ಟ್ಯಾನ್​ ಆದ ಜಾಗಕ್ಕೆ ಹಚ್ಚುವುದರಿಂದ ಮಾಡುವುದರಿಂದ ಸನ್​ಟ್ಯಾನ್​ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.. ವಾರದಲ್ಲಿ 2 ಬಾರಿ ಹೀಗೆ ಮಾಡುವುದರಿಂದ ಸನ್​ಟ್ಯಾನ್​ ಕಡಿಮೆಯಾಗುತ್ತದೆ,

ಮಜ್ಜಿಗೆ:

ಮಜ್ಜಿಗೆಯು ಕೂಡ ನಮ್ಮ ದೇಹಕ್ಕೆ ತುಂಬಾನೇ ಅವಶ್ಯಕ.. ದೇಹಕ್ಕೆ ತಂಪನ್ನು ಒದಗಿಸುತ್ತದೆ.. ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆ್ಯಸಿಡ್​​ ಇರುವುದರಿಂದ ನಿಮ್ಮ ಚರ್ಮದ ಮೇಲಿನ ಎಪಿಡರ್ಮಿಸ್ ಅನ್ನು ನೈಸರ್ಗಿಕವಾಗಿ ಸಂರಕ್ಷಿಸಿ ತ್ವಚೆಯನ್ನು ಕಾಪಾಡಲು ಸಹಕಾರಿ ಮಾಡುತ್ತದೆ… ಲ್ಯಾಕ್ಟಿಕ್ ಆ್ಯಸಿಡ್​ ಚರ್ಮಕ್ಕೆ ಚಿಕಿತ್ಸೆ ನೀಡಿ ಮೆಲಾನಿನ್​​​​ ಅಂಶವನ್ನ ಕಡಿಮೆ ಮಾಡುತ್ತದೆ. ಚರ್ಮಕ್ಕೆ ಬೇಕಾದ ಪೋಷಕಾಂಶವನ್ನು ನೀಡುತ್ತದೆ.

ಸೌತೆ ಕಾಯಿ

ಸೌತೆಕಾಯಿಯಲ್ಲಿಯೂ ಕೂಡ ನೀರಿನ ಅಂಶ ಹೆಚ್ಚಾಗಿರುತ್ತದೆ.. ಹಾಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ನೀರಿನ ಅಂಶವಿರುವ ಹಣ್ಣನ್ನು ತಿನ್ನಬೇಕಾಗುತ್ತದೆ… ಅದರಲ್ಲಿ ಸೌತೆಕಾಯಿಯು ಕೂಡ ಒಂದು… ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ.. ಅದಕ್ಕೆ ಸೌತೆಕಾಯಿಯು ಕೂಡ ನಮ್ಮ ಚರ್ಮವನ್ನು ಸನ್ ಬರ್ನ್ನಿಂದ ಸಂರಕ್ಷಿಸುತ್ತದೆ.

ನಿಂಬೆಹಣ್ಣಿನ ರಸ: 

ನಿಂಬೆಹಣ್ಣಿನ ರಸ  ಚರ್ಮದ ತ್ವಚೆಗೆ ತಣ್ಣನೆಯ​ ಅನುಭವವನ್ನ ನೀಡುವುದರ ಜೊತೆಗೆ, ನ್ಯಾಚುರಲ್​ ಬ್ಲೀಚ್​ ಒದಗಿಸುತ್ತದೆ. ನಿಂಬೆರಸವನ್ನು ಸೌತೆಕಾಯಿಯೊಂದಿಗೆ ಮಿಕ್ಸ್ ಮಾಡಿ ಹಚ್ಚಿಕೊಂಡು 10 ನಿಮಿಷಗಳ ನಂತರ ಮುಖ ತೊಳೆಯುವುದರಿಂದ ಟ್ಯಾನ್​ ಕಡಿಮೆ ಆಗಿ, ಚರ್ಮದ ಕಾಂತಿ ಹೆಚ್ಚುತ್ತದೆ. ಅಷ್ಟೆ ಅಲ್ಲದೆ ಚರ್ಮವು ಫಳ ಫಳನೆ ಹೊಳೆಯುವಂತೆ ಮಾಡುತ್ತದೆ..

ಬೇಸಿಗೆ ಸಮಯದಲ್ಲಿ ನಮ್ಮ ಚರ್ಮ ಬಹುಬೇಗ ಟ್ಯಾನ್ ಆಗಿ ಬಿಡುತ್ತದೆ.. ಅದರಿಂದ ಚರ್ಮವನ್ನು ಸಂರಕ್ಷಿಸಲು ಈ ಮೇಲಿನ ಟಿಪ್ಸ್’ಗಳನ್ನು ಟ್ರೈ ಮಾಡಿ… ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ..

Edited By

Manjula M

Reported By

Manjula M

Comments