ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತಿದ್ಯಾ..? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ..!!

ದಿನನಿತ್ಯದ ಬದುಕಿನಲ್ಲಿ ನಾವು ಕೆಲವೊಮ್ಮೆ ಬಿಡುವಿಲ್ಲದಷ್ಟು ಬ್ಯುಸಿಯಾಗಿ ಬಿಡುತ್ತೇವೆ… ಕೆಲಸದ ಜಂಜಾಟದ ನಡುವೆ ನಮ್ಮ ಆರೋಗ್ಯದ ಕಡೆ ಗಮನವನ್ನು ಕೊಡುವುದಿಲ್ಲ.. ರುಚಿ ರುಚಿಯಾಗಿ ಮಾಡಿಕೊಂಡು ತಿನ್ನಲು ಟೈಮ್ ಇಲ್ಲದೆ ಹೋಟೆಲ್ ಮೊರೆ ಹೋಗುತ್ತೇವೆ.. ಸೋಡಾ ಹಾಕಿರುವ ಹೊಟೇಲ್ ಊಟ ಮಾಡಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ.. ಅಜೀರ್ಣತೆ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತೇವೆ..ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ.. ಅದರಲ್ಲೂ ಕೊಲೆಸ್ಟ್ರಾಲ್ ಇದ್ದರೆ ಮುಗಿದೇ ಹೋಯಿತು.. ಎದ್ದೇಳುವುದು, ಕುಳಿತುಕೊಳ್ಳುವುದು ಎರಡು ಕಷ್ಟವೇ ಸರಿ.. ತೂಕ ಹೆಚ್ಚಾಗದಂತೆ ನಮ್ಮ ದೇಹವನ್ನು ನೋಡಿಕೊಳ್ಳುವುದು ಹೇಗೆ..? ತೂಕ ಹೆಚ್ಚಿಸಿಕೊಳ್ಳಲು ನಮ್ಮ ದೇಹಕ್ಕೆ ಅವಶ್ಯಕತೆ ಇರುವ ಆಹಾರಗಳು ಯಾವುವು ಇವೆಲ್ಲವೂ ಕೂಡ ತುಂಬಾನೇ ಮುಖ್ಯ..
ಸಾಮಾನ್ಯವಾಗಿ ಸಿಗುವ ಒಂದಿಷ್ಟು ಆಹಾರ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ದೇಹದ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ತಿಳಿದುಕೊಳ್ಳೋಣ..
ಸೆಲೆರಿ ಎಲೆಗಳು
ಈ ಸೆಲರಿ ಎಲೆಗಳಲ್ಲಿ ದೇಹಕ್ಕೆ ಬೇಕಾದ ಹೆಚ್ಚು ಕ್ಯಾಲೋರಿಗಳು ಇರುತ್ತವೆ.. ಸಾಮಾನ್ಯವಾಗಿ ಆಹಾರಗಳನ್ನು ಸೇವಿಸುವ ಮೂಲಕ ನಾವು ಕ್ಯಾಲೋರಿಗಳನ್ನು ಪಡೆದುಕೊಳ್ಳುತ್ತೇವೆ.. ಈ ಆಹಾರವನ್ನು ಜೀರ್ಣಿಸಿಕೊಳ್ಳಬೇಕಾದರೆ ಈ ಆಹಾರದಿಂದ ಪಡೆಯಬಹುದಾದುದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಇದರಿಂದ ತೂಕ ಇಳಿಯುತ್ತದೆ. ಎಂದು Academy of Nutrition and Dietetics ಸಂಸ್ಥೆಯ ವಕ್ತಾರರಾದ ಆಂಜೆಲಾ ಲೆಮಾಂಡ್, R.D.N. ರವರು ತಿಳಿಸುತ್ತಾರೆ. " ನಮ್ಮ ದೇಹದಲ್ಲಿ ಕೊಬ್ಬನ್ನು ಕರಗಿಸಿ ತೂಕ ಇಳಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ..
ದಪ್ಪ ಮೆಣಸಿನ ಕಾಯಿ
ಸಾಮಾನ್ಯವಾಗಿ ದಪ್ಪ ಮೆಣಸಿನ ಕಾಯಿ ಅಂದರೆ ಮೂಗು ಮುರಿಯುವವರೆ ಹೆಚ್ಚು.. ಆದರೆ ಅದು ಕೂಡ ನಮ್ಮ ದೇಹದ ತೂಕವನ್ನು ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ..ದಪ್ಪ ಮೆಣಸಿನಕಾಯಿಯನ್ನು ಕತ್ತರಿಸಿ ಚಿಕ್ಕ ಚಿಕ್ಕ ತುಂಡು ಮಾಡಿ ಸಣ್ಣ ಉರಿಯಲ್ಲಿ, ಕಡಿಮೆ ಎಣ್ಣೆಯೊಡನೆ ಹುರಿದು ಸೇವಿಸಬಹುದು. ಯಾವುದೇ ಬಗೆಯ ಅಡುಗೆ ರೂಪದಲ್ಲಿಯಾದರೂ ಸರಿ, ದೊಣ್ಣೆಮೆಣಸಿನ ಸೇವನೆಯಿಂದ ರುಚಿಕರ ಊಟ ದೊರಕುವ ಜೊತೆಗೇ ಕ್ಯಾಲೋರಿಗಳೂ ಕಡಿಮೆ ನಮ್ಮ ದೇಹಕ್ಕೆ ಸಿಗುತ್ತವೆ.
ಬ್ರೋಕೋಲಿ
ಬ್ರೋಕೋಲಿ ಇದರಲ್ಲಿ ಝೀರೋ ಕ್ಯಾಲೋರಿ ಇರುತ್ತದೆ.. ಝೀರೋ ಕ್ಯಾಲೋರಿ ಎಂದರೆ ಸೇವಿಸಿದ ಆಹಾರದಿಂದ ಪಡೆಯುವ ಕ್ಯಾಲೋರಿಗಳಷ್ಟೇ ಪ್ರಮಾಣದ ಕ್ಯಾಲೋರಿಗಳನ್ನು ಜೀರ್ಣಿಸಿಕೊಳ್ಳಲು ಬಳಸಬೇಕಾಗಿ ಬಂದಾಗ ಈ ಆಹಾರಗಳಿಗೆ ಝೀರೋ ಕ್ಯಾಲೋರಿ ಎಂದು ಕರೆಯುತ್ತಾರೆ. ಬ್ರೋಕೋಲಿ ಇಂತಹ ಒಂದು ಆಹಾರವಾಗಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಅಪ್ಪಟ ಹಸಿರು ಹೂಕೋಸಿನಂತಿರುವ ಈ ತರಕಾರಿ ಕೇವಲ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರವಲ್ಲ, ಕ್ಯಾನ್ಸರ್ ವಿರುದ್ದ ಹೋರಾಡುವ ಫೈಟೋ ಕೆಮಿಕಲ್ಸ್ ಎಂಬ ಪೋಷಕಾಂಶಗಳನ್ನೂ ಹೊಂದಿದೆ.
ಹೂಕೋಸು
ಸಾಮಾನ್ಯಾಗಿ ಆಲೂಗಡ್ಡೆ ಮತ್ತು ಹೂಕೋಸುಗಳ ಬಗ್ಗೆ ಅಸಡ್ಡೆ ಇದೆ. ಏಕೆಂದರೆ ಈ ತರಕಾರಿಗಳನ್ನು ನಾವು ಹೆಚ್ಚಾಗಿ ಬಳಸುತ್ತಿರುತ್ತೇವೆ... ವಾಸ್ತವವಾಗಿ ತೂಕ ಇಳಿಸಿಕೊಳ್ಳುವವರಿಗೆ ಹೂಕೋಸು ಸಹ ಉತ್ತಮ ಆಯ್ಕೆಯಾಗಿದೆ..ಹೂಕೋಸನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ.. ಹಾಗಾಗಿ ಹೂಕೋಸನ್ನು ಹಬೆಯಲ್ಲಿ ಬೇಯಿಸಿ ಇತರ ಸೊಪ್ಪು ಮತ್ತು ಸಾಂಬಾರ ವಸ್ತುಗಳ ಜೊತೆಗೆ ಹಾಗೂ ಕೊಂಚ ಲಿಂಬೆರಸವನ್ನು ಬೆರೆಸಿ ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇದರಿಂದ ನಿಮ್ಮ ದೇಹದ ತೂಕ ಕೂಡ ಕಡಿಮೆಯಾಗುತ್ತದೆ.
ಚೆರ್ರಿ ಟಮೊಟೋಗಳು
ಸಾಮಾನ್ಯವಾಗಿ ಮನೆಯಲ್ಲಿ ಟಮೋಟ ಹಣ್ಣುಗಳು ಇರುವುದ ಸರ್ವೆ ಸಾಮಾನ್ಯವಾಗಿರುತ್ತದೆ.. ಸಾಮಾನ್ಯ ಟೊಮಾಟೋ ಒಂದು ಕಪ್ ನಲ್ಲಿ 60ರಷ್ಟು ಕ್ಯಾಲೋರಿಗಳನ್ನು ಹೊಂದಿದ್ದರೂ ಉಳಿದ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿವೆ. ಹಾಗಾಗಿ ನಿಮ್ಮ ಸಾಲಾಡ್ ನಲ್ಲಿ ಹಣ್ಣುಗಳ ಸ್ಥಾನದಲ್ಲಿ ಈ ಪುಟ್ಟ ದ್ರಾಕ್ಷಿಯಂತಿರುವ ಚೆರ್ರಿ ಟೊಮಾಟೋಗಳನ್ನು ಸೇವಿಸಿದರೆ ನಿಮ್ಮ ತೂಕ ಕಡಿಮೆಯಾಗುತ್ತದೆ.. ಕೊಬ್ಬು ನಿಮ್ಮ ದೇಹವನ್ನು ಪ್ರವೇಶಿಸಿದಂತೆ ನೋಡಿಕೊಳ್ಳುವಲ್ಲಿ ಸಹಾಯಕಾರಿಯಾಗುತ್ತದೆ.
ಪಾಲಕ್ ಸೊಪ್ಪು
ಅತ್ಯಂತ ಸುರಕ್ಷಿತವಾದ ಆಹಾರಗಳ ಪಟ್ಟಿಯಲ್ಲಿ ದಪ್ಪನೆಯ ಎಲೆಗಳ ಆಹಾರಗಳು ಪ್ರಮುಖ ಸ್ಥಾನ ಪಡೆಯುತ್ತವೆ. ಅಂದರೆ ಇವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ ಹಾಗೂ ಅಗತ್ಯ ಪೋಷಕಾಂಶಗಳು ಹೆಚ್ಚಿರುತ್ತವೆ. ಪಾಲಕ್ ಸೊಪ್ಪು ಮತ್ತು ಬಸಲೆ ಸೊಪ್ಪು ವ್ಯಾಯಾಮ ನಿರತ ವ್ಯಕ್ತಿಗಳಿಗೆ ಹೇಳಿ ಮಾಡಿಸಿದಂತಹ ಆಹಾರಗಳಾಗಿವೆ. ಹಾಗಾಗಿ ಈ ಅಂಶಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಸ್ನಾಯುಗಳನ್ನು ಬೆಳೆಸಲು ಮತ್ತು ಕೊಬ್ಬನ್ನು ಹೆಚ್ಚಿಸಿಕೊಳ್ಳದೇ ಇರಲು ಸಾಧ್ಯವಾಗುತ್ತದೆ. ಹಾಗಾಗಿ ಹಸಿರು ಸೊಪ್ಪು ತರಕಾರಿಗಳೇ ಆರೋಗ್ಯ ಮತ್ತು ತೂಕ ಕಾಪಾಡಿಕೊಳ್ಳಲು ಅತ್ಯುತ್ತಮ ಆಹಾರಗಳಾಗಿವೆ.
ತೂಕ ಕಡಿಮೆ ಮಾಡಿಕೊಳ್ಳಲು ಇನ್ನು ಮುಂದೆ ಯೋಚನೆ ಮಾಡುತ್ತಾ ಕೂರಬೇಡಿ.. ಮೇಲೆ ತಿಳಿಸಿರುವ ಟಿಪ್ಸ್ ಅನ್ನು ಟ್ರೈ ಮಾಡಿ.. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ..
Comments