ನೀವು ಸಂಕೋಚದಿಂದ ಮೂತ್ರ ತಡ್ಕೊತ್ತಿದ್ದೀರಾ : ಹಾಗಿದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ…!!!

ನಾವು ಎಷ್ಟೋ ಬಾರಿ ಹೊರಗೆ ಹೋಗಬೇಕಾದಾಗ ಮೂತ್ರ ವಿಸರ್ಜನೆಯನ್ನು ತಡೆಯುತ್ತೇವೆ. ನಮಗೆ ತಡೆಯೋದ್ರಿಂದ ತೊಂದರೆಯಾಗುತ್ತೆ ಅಂತಾ ಗೊತ್ತು. ಆದರೆ ಯಾವ ಯಾವ ತೊಂದರೆಗಳನ್ನು ಅನುಭವಿಸಿ ಯಾವೆಲ್ಲಾ ಕಾಯಿಲೆಗೆ ತುತ್ತಾಗುತ್ತೀರಿ ಅಂತಾ ಗೊತ್ತಾ..? ದೈಹಿಕವಾಗಿ ನಡೆಯುವ ಕ್ರಿಯೆಗಳನ್ನು ನಾವು ತಡೆದುಕೊಳ್ಳಬಾರದು. ಅಯ್ಯೋ ಎಲ್ಲರೂ ಇದ್ದಾರೆ…ಹೇಗೆ ವಾಶ್ ರೂಂ ಗೆ ಹೋಗೋದು ಅಂತಾ ಎಷ್ಟೇ ತುರ್ತು ಇದ್ದರೂ ನಾವು ಮಾಡೋದನ್ನೇ ನಿಲ್ಲಿಸಿಬಿಡುತ್ತೇವೆ. ಆದರೆ ಹಾಗೇ ಮಾಡೋದ್ರಿಂದ ಕಾಯಿಲೆ ಅಲ್ಲಾ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ,ಎಚ್ಚರ …!
ಹೌದು ಮೂತ್ರ ತಡೆಯುವುದರಿಂದ ಹಲವಾರು ಸಮಸ್ಯೆಗಳು ಕಾಡುತ್ತವೆ. ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದಾಗ ಮಾಡಬಿಡಬೇಕು.ತಡೇಯೋದ್ರಿಂದ ಒಮ್ಮೊಮ್ಮೆ ಭಯಾಕನ ಹೊಟ್ಟೆ ನೋವು ಬರುತ್ತದೆ, ಕಿಡ್ನಿ ಸಮಸ್ಯೆ ಬೇಗ ಬರುತ್ತದೆ. ಮೂತ್ರ ವಿಸರ್ಜನೆಯನ್ನು ತಡೆಯೋದ್ರಿಂದ ಕೆಲವರಿಗೆ ಉಸಿರಾಟಕ್ಕೂ ತೊಂದರೆಯಾಗುತ್ತದೆ.
ಮೂತ್ರ ವಿಸರ್ಜನೆಯನ್ನು ತಡೆಯೋದ್ರಿಂದ ಆಗುವ ತೊಂದರೆಗಳು….
ಮೂತ್ರನಾಳದಲ್ಲಿ ಉರಿ: ಮೂತ್ರವನ್ನು ಹೆಚ್ಚು ಹೊತ್ತು ತಡೆ ಹಿಡಿಯುವುದರಿಂದ ಆ ನಂತರ ಮೂತ್ರ ವಿಸರ್ಜನೆ ಮಾಡುವಾಗ ಭಯಾನಕ ಉರಿ ಕಂಡು ಬರುತ್ತದೆ. ಇದಕ್ಕೆ ಉರಿ ಮೂತ್ರ ಸಮಸ್ಯೆ ಎನ್ನುತ್ತಾರೆ. ಇದರಿಂದ ಹೊಟ್ಟೆ ನೋವೂ ಕಾಣಿಸಿಕೊಳ್ಳುತ್ತದೆ. ಇದು ಒಂದಷ್ಟು ದಿನ ಹಾಗೇ ಮುಂದುವರೆಯುತ್ತದೆ.
ಮೂತ್ರಕೋಶ ಊತ: ಮೂತ್ರಕೋಶದಲ್ಲಿ ಕೇವಲ 15 ಔನ್ಸ್‌ಗಳಷ್ಟು ಮಾತ್ರ ಮೂತ್ರ ಹಿಡಿದಿಡಲು ಸಾಧ್ಯ. ದಿನದಲ್ಲಿ 8 ಗ್ಲಾಸ್ ನೀರು ಕುಡಿದರೆ ಅದರ ಸಾಮರ್ಥ್ಯ 64 ಔನ್ಸ್ ಆಗುತ್ತದೆ. ಇದರ ಕಾಲು ಭಾಗದಷ್ಟನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವೂ ಮೂತ್ರಕೋಶಕ್ಕೆ ಇಲ್ಲ. ಹಾಗಿಗಿಯೇ ನಿಮಗೆ ನೀರು ಕುಡಿದಷ್ಟು, ಬೇಗ ಬೇಗ ಮೂತ್ರ ಪಾಸ್ ಆಗುತ್ತದೆ. ಆದರೆ ಅದನ್ನು ಕಂಟ್ರೋಲ್ ಮಾಡಲು ಬಿಡಬಾರದು. ಮಾಡಿದರೆ ಮೂತ್ರಕೋಶ ಊತ ಕಂಡು ಬರುತ್ತದೆ.ಕಿಡ್ನಿ ಸ್ಟೋನ್: ಮೂತ್ರವನ್ನು ತಡೆಹಿಡಿಯುತ್ತಿದ್ದರೆ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಎಂದು ನಮಗೆ ಗೊತ್ತಿರುತ್ತದೆ. ದೇಹದಲ್ಲಿ ಹೆಚ್ಚಿನ ಸೋಡಿಯಂ ಮತ್ತು ಕ್ಯಾಲ್ಶಿಯಂ ಉತ್ಪತ್ತಿಯಾಗಿ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತದೆ. ಇದು ವಿಪರೀತ ಎನ್ನುವಷ್ಟು ಹೊಟ್ಟೆನೋವು ಕಾಡುತ್ತದೆ. ಹಾಗಾಗಿಯೇ ಕಿಡ್ನಿ ಸ್ಟೋನ್ ತಡೆಗಟ್ಟಲು, ವಿಪರೀತ ನೀರು ಕುಡಿಯಬೇಕು, ಅದರಂತೇ ಆಗಾಗ್ಗ ಮೂತ್ರಕ್ಕೂ ಹೋಗಬೇಕು.
ಬ್ಯಾಕ್ಟಿರಿಯಾ ಸಮಸ್ಯೆ: ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳು ಕಾಣಿಸಿಕೊಳ್ಳುತ್ತವೆ. ಆ ನಂತರ ಅದು ದೇಹಕ್ಕೆ ಹರಡುತ್ತದೆ. ರೋಗ ನಿರೋಧಕ ಸಮಸ್ಯೆಯನ್ನು ತಡೆಯುತ್ತದೆ. ನಂತರ ಜ್ವರ ಬರುವ ಸಂಭವವಿದೆ. ಚಳಿಯೂ ಆರಂಭವಾಗುತ್ತದೆ. ಹೊಟ್ಟೆ ನೋವು, ವಿಪರೀತ ನೋವು, ಆತಂಕ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
Comments