ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಲೂ ಸಿಂಪಲ್ ಟಿಪ್ಸ್..!!

ಫಾಸ್ಟ್’ಫುಡ್ ಕಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡೋದನ್ನೆ ಬಿಟ್ಟು ಬರೀ ಕೆಲಸ ಅಂತಾ ಬ್ಯುಸಿ ಆಗಿಬಿಟ್ಟಿರುತ್ತಾರೆ.. ಕೆಲಸದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ತಮ್ಮ ಆರೋಗ್ಯದ ಬಗ್ಗೆ ಕೇರ್ ಲೆಸ್ ಮಾಡಿರುತ್ತಾರೆ.. ಹೆಚ್ಚು ಒತ್ತಡದಿಂದ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಹೃದಯ ಸಂಬಂಧಿತ ಸಾವುಗಳು ಸಾಮಾನ್ಯ ಎಂಬಂತೆ ದಿನನಿತ್ಯ ಹಾರ್ಟ್ ಆಟ್ಯಾಕ್ ಆಗಿ ಜವರಾಯನ ಪಾದವನ್ನುಸೇರುತ್ತಾರೆ.. ಮಧುಮೇಹ, ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್, ಧೂಮಪಾನ ಹಾಗೂ ಅನುವಂಶಿಕ ಅಂಶಗಳು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗಲು ಕಾರಣವಾಗುತ್ತವೆ. ಅನಾರೋಗ್ಯಕರ ಜೀವನಶೈಲಿ ಹೃದಯ ಸಂಬಂಧಿತ ಕಾಯಿಲೆಗೆ ಕಾರಣವಾಗಿ ಬಿಡುತ್ತದೆ... ಆಗ್ನೇಯ ಏಷ್ಯಾದ ಜನರಲ್ಲಿ ಅನುವಂಶಿಕ ಕಾರಣದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿತ್ತವೆ... ಆರೋಗ್ಯಕರ ಜೀವನಶೈಲಿಯಿಂದ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ.
ಅಷ್ಟೆ ಅಲ್ಲದೆ ಅರೋಗ್ಯಕರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳು ಹತ್ತಿರ ಬರದಂತೆ ನೋಡಿಕೊಳ್ಳಬೇಕಾಗುತ್ತದೆ.. ಅದಕ್ಕೆ ಒಂದಿಷ್ಟು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಜೀವನಶೈಲಿಯನ್ನು ಬದಲಾಯಿಸಬೇಕು: ಸಾಮಾನ್ಯವಾಗಿ ಜನರು ವ್ಯಾಯಾಮ ಮಾಡುವುದಿಲ್ಲ. ಜೀವನಶೈಲಿಯೂ ಕೂಡ ಹೃದಯ ಸಂಬಂಧಿತ ರೋಗಕ್ಕೆ ಕಾರಣವಾಹಬಹುದು. ಬೊಜ್ಜು ಹೆಚ್ಚಾದ್ದಂತೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಹಾಗಾಗಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು.ಆಗ ಹೃದಯ ಸಂಬಂಧ ಕಾಯಿಲೆಯಿಂದ ದೂರ ಉಳಿಯಬಹುದು..
ಒಳ್ಳೆಯ ಆಹಾರ ಸೇವನೆ: ನಮ್ಮ ಆರೋಗ್ಯಕರ ಆಹಾರ ಸೇವನೆ ಹೆಚ್ಚು ಮುಖ್ಯವಾಗಿರುತ್ತದೆ.. ಹೆಚ್ಚು ಪ್ರಮಾಣದ ಕೊಬ್ಬಿನಾಂಶ ಇರುವ ಜಂಕ್ ಪುಡ್ , ಉಪ್ಪು, ಸಕ್ಕರೆಯಿಂದ ಹೃದಯ ಹಾಳಾಗುತ್ತದೆ… ಹಾಗಾಗಿ ಇವುಗಳಿಂದ ದೂರ ಇರಬೇಕು. ದೇಹಕ್ಕೆ ಅಗತ್ಯವಾದಷ್ಟು ಕ್ಯಾಲೋರಿಯ ಆಹಾರದಲ್ಲಿ ಪ್ರೋಟೀನ್, ವಿಟಮಿನ್, ಖನಿಜಾಂಶ , ಹಾಗೂ ಕಡಿಮೆ ಪ್ರಮಾಣದ ಕೊಬ್ಬಿನಾಂಶ ಇರಬೇಕಾಗುತ್ತದೆ. ಈ ರೀತಿಯ ಆಹಾರದಿಂದ ಹೃದಯವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು..
ಒತ್ತಡ ಜೀವನ ಬೇಡ: ಸಿಟಿಯಲ್ಲಿ ವಾಸ ಮಾಡುವ ಹೆಚ್ಚು ಜನ ಒತ್ತಡಕ್ಕೆ ಒಳಗಾಗುತ್ತಾರೆ.. ಕೆಲಸ ಕಾರ್ಯ ಅಂತಾ ಬ್ಯುಸಿಯಾಗಿರುತ್ತಾರೆ... ಇಂತಹ ಒತ್ತಡ ಸಮಯದಲ್ಲಿ ಹೃದಯಕ್ಕೆ ಹಾನಿಯುಂಟಾಗುವ ಸಂಭವವಿರುತ್ತದೆ... ಹಾಗಾಗಿ ಒತ್ತಡ ಇರುವ ಕೆಲಸದಿಂದ ದೂರ ಇದ್ದರೆ ಒಳ್ಳೆಯದು.. ಹೆಚ್ಚು ಕಾಲ ನಿದ್ದೆ ಮಾಡಬೇಕು.. ನಿದ್ದೆ ಮಾಡುವುದರಿಂದ ಆರೋಗ್ಯಕರ ಜೀವನ ನಮ್ಮದಾಗುತ್ತದೆ… ಇದರಿಂದಾಗಿ ಹೃದಯಕ್ಕೆ ಸಂಬಂಧಿತ ರೋಗಗಳನ್ನು ತಡೆಗಟ್ಟಬಹುದಾಗಿದೆ
ಧೂಮಪಾನ, ಮಧ್ಯಪಾನ ಬಿಡಬೇಕು: ಧೂಮಪಾನ ಸೇವನೆಯಿಂದ ಹೃದಯ ಹಾನಿಯಾಗುತ್ತದೆ. ಧೂಮಪಾನದಿಂದ ಹೃದಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಬಹುದು. ಧೂಮಪಾನ ಹೊಗೆ ಸೇವನೆ ಕೂಡಾ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ.. ಅಷ್ಟೆ ಅಲ್ಲದೆ ಅವುಗಳಿಂದ ದೂರ ಇರಬೇಕು.. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು..
ಪ್ರತಿನಿತ್ಯ ವ್ಯಾಯಾಮ: ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ವ್ಯಾಯಾಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವ್ಯಾಯಾಮ ಮಾಡುವುದರಿಂದ ಪಂಪಿಂಗ್ ಜಾಸ್ತಿಯಾಗಿ ಹೃದಯದ ಸ್ನಾಯುಗಳು ಹೆಚ್ಚು ಬಲಿಷ್ಟಗೊಳ್ಳುತ್ತವೆ. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ , ಕೊಲೆಸ್ಟರಾಲ್, ಕಡಿಮೆಯಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲಿತ ಪ್ರಮಾಣದಲ್ಲಿ ಇರುತ್ತದೆ…
ಹೃದಯ ಸಂಬಂಧಿತ ಕಾಯಿಲೆಗಳನ್ನು ಬೇಜಾವಬ್ದಾರಿ ಮಾಡಿದರೆ ಸಾವು ಕಟ್ಟಿಟ್ಟ ಬುತ್ತಿ ಅನ್ನೋದನ್ನ ಮರೆಯಬಾರದು.. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ..ಹಾಗಾಗಿ ಎಚ್ಚೆತ್ತು ಕೊಂಡು ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಿಕೊಳ್ಳಬೇಕು.. ಈ ಮಾಹಿತಿಯನ್ನು ನೀವು ತಿಳಿದುಕೊಂಡು ಇತರರಿಗೂ ಷೇರ್ ಮಾಡಿ.
Comments