ಸಾಸಿವೆಕಾಳಿನಲ್ಲಿದೆ ಆರೋಗ್ಯ ವೃದ್ಧಿಸುವ ಸಾವಿರಾರು ಪ್ರಯೋಜನಗಳು..!

05 Oct 2018 3:13 PM | Health
1871 Report

ನಮ್ಮ ಅಡುಗೆಯಲ್ಲಿ ಸಾಸಿವೆಯನ್ನು ಬಳಸುತ್ತೇವೆ, ಈ ಸಾಸಿವೆಯನ್ನ ಏಕೆ ಬಳಸುತ್ತೇವೆ ಎನ್ನುವುದೇ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಆದರೂ ಕೂಡ ಯಾವುದೇ ಆಹಾರಕ್ಕೆ ಒಗ್ಗರಣೆ ಹಾಕಬೇಕಾದರೆ ಅದಕ್ಕೆ ನಾವು ತಪ್ಪದೇ ಸಾಸಿವೆಯನ್ನು ಹಾಕುತ್ತೇವೆ. ಈ ರೀತಿ ಸಾಸಿವೆಯನ್ನು ಬಳಸುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಆ ಕಾರಣದಿಂದಾಗಿಯೇ ನಮ್ಮ ಪೂರ್ವಿಕರು ಯಾವುದಾದರೊಂದು ಮಾರ್ಗದಿಂದ ಇದನ್ನು ತಿನ್ನುವಂತೆ ಮಾಡಬೇಕು ಎಂದು ನಿರ್ಧರಿಸಿ ಸಾಸಿವೆಯನ್ನು ಒಗ್ಗರಣೆಗೆ ಬಳಸುವುದನ್ನ ನಮಗೆ ಹೇಳಿಕೊಟ್ಟಿದ್ದಾರೆ.

ಸಾಸಿವೆಯಲ್ಲಿ ನಮ್ಮ ಆರೋಗ್ಯವನ್ನು ಹೆಚ್ಚಿಸುಂತಹ ಗ್ಲುಕೊಸಿನೊಲೇಟ್​ ಎಂಬ ನೈಸರ್ಗಿಕ ಅಂಶವನ್ನು ಒಳಗೊಂಡಿದೆ. ಈ ಸಾಸಿವೆಯನ್ನು ಒಗ್ಗರಣೆಗೆ ಬಳಸುವುದರಿಂದ ರುಚಿ ಮತ್ತು ವಾಸನೆ ಎರಡೂ ಕೂಡ ಉತ್ತಮವಾಗಲಿದೆ.

ಕರುಳಿನ ಕ್ಯಾನ್ಸರ್​ಗೆ ರಾಮಬಾಣ.. 

ಸಾಸಿವೆಯಲ್ಲಿ ಇರುವ ಅಂಶಗಳು ವಿಶೇಷವಾಗಿ ಕ್ಯಾನ್ಸರ್​ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಒಮೆಗಾ 3 ಫ್ಯಾಟಿ ಆ್ಯಸಿಡ್​, ಸೆಲೆನಿಯಂ, ಮ್ಯಾಂಗನಿಸ್​, ಮೆಗ್ನೇಶಿಯಂ, ವಿಟಮಿನ್​ ಬಿ1, ರಂಜಕ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಸತುವನ್ನು ಸಮೃದ್ದವಾಗಿ ಸಿಗುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ..

ಸಾಸಿವೆಯಲ್ಲಿ ಕ್ಯಾಲರಿಗಳು ಕಡಿಮೆ ಇರುವ ಕಾರಣದಿಂದಾಗಿ ನಮ್ಮ ಶರೀರದ ತೂಕವನ್ನು ಇಳಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.

ಮೈಗ್ರೇನ್​ ಮತ್ತು ಅಸ್ತಮಾಕ್ಕೆ ಮದ್ದು..

ಸಾಸಿವೆಯಲ್ಲಿ ಹೆಚ್ಚಾಗಿರುವ ಸೆಲೆನಿಯಂ ಅಸ್ತಮಾ ಮತ್ತು ರುಮಟಾಯ್ಡ್​ ಸಂಧಿವಾತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ಮೆಗ್ನೀಶಿಯಂ ಬಿಪಿಯನ್ನು ತತಗ್ಗಿಸಿ, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಋತುಬಂಧವನ್ನು ನಿವಾರಿಸಿ, ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ. ಇದರ ಜೊತೆಗೆ ಆಗಾಗ ಕಾಣಿಸಿಕೊಳ್ಳುವ ಮೈಗ್ರೇನ್​ ಅನ್ನು ತಡೆಯುತ್ತದೆ.

ಚರ್ಮರೋಗ ನಿವಾರಕ..

ಸಾಸಿವೆಯ ಸೇವನೆಯಿಂದ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಸೋರಿಯಾಸಿಸ್​ನಂತಹ ಚರ್ಮ ಸಂಬಂಧಿ ಕಾಯಿಲೆಗಳನ್ನು ನಿವಾರಣೆ ಮಾಡುವುದಕ್ಕೆ ಇದು ಸಹಕಾರಿಯಾಗಿದೆ.

ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ ..

ಶೀತದಿಂದ ಆದ ಜ್ವರವನ್ನು ಪರಿಣಾಮಕಾರಿಯಾಗಿ ನಿವಾರಿಸುವ ತಾಕತ್ತು ಈ ಸಾಸಿವೆಗೆ ಇದೆ. ಸಾಸಿವೆಯನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಶ್ವಾಸನಾಳದಲ್ಲಿನ ಲೋಳೆಯನ್ನು ನಿವಾರಿಸಿ ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ.

ಸಾಸಿವೆಯ ಪ್ರಯೋಜನ ತಿಳಿದುಕೊಂಡ್ರಿ ಅಲ್ವ..  ಈ ಮಾಹಿತಿಯನ್ನು ಇತರರಿಗೂ ಷೇರ್ ಮಾಡಿ.

 

Edited By

Manjula M

Reported By

Manjula M

Comments