ಪ್ರತಿದಿನ ಕರ್ಜೂರ ತಿನ್ನುವುದರಿಂದ ಆಗುವ ಉಪಯೋಗಗಳ ಬಗ್ಗೆ ನಿಮಗೆಷ್ಟು ಗೊತ್ತು..?
ನಾವು ಆರೋಗ್ಯವಾಗಿ ಇರಬೇಕು ಅಂದರೆ ಸಾಕಷ್ಟು ರೀತಿಯ ಆಹಾರ ಮತ್ತು ಹಣ್ಣುಗಳ ಮೊರೆ ಹೋಗುತ್ತೆವೆ.. ಅಂತಹ ಹಣ್ಣುಗಳಲ್ಲಿ ಕರ್ಜೂರ ಕೂಡ ಒಂದು.. ಕರ್ಜೂರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಉತ್ತುತ್ತಿ ಹಣ್ಣು ಎಂದು ಕರೆಯುವ ಈ ಹಣ್ಣು ನೂರಾರು ವರ್ಷಗಳಿಂದ ನಮ್ಮ ಹಿರಿಯರು ಈ ಹಣ್ಣನ್ನು ತಿನ್ನುತ್ತಿದ್ದಾರೆ. ಇನ್ನು ಈ ಹಣ್ಣನ್ನು ತಿನ್ನುವುದರಿಂದ ಆಗುವ ಉಪಯೋಗಗಳು ನಿಮಗೆ ಗೊತ್ತಾದರೆ ಒಂದು ದಿನ ಕೂಡ ಮಿಸ್ ಮಾಡದೆ ತಿನ್ನುತ್ತೀರಿ.
- ಕಬ್ಬಿಣ, ಖನಿಜಾಂಶ, ಕ್ಯಾಲ್ಸಿಯಂ, ಅಮೈನೊ ಆ್ಯಸಿಡ್, ರಂಜಕ ಹಾಗೂ ವಿಟಮಿನ್ ಮಿನರಲ್, ಫೈಬರ್,ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕೇವಲ ಮೂರು ಕರ್ಜೂರವನ್ನ ಪ್ರತಿದಿನ ತಿನ್ನುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶ ನಮ್ಮ ದೇಹ ಸೇರುತ್ತದೆ.
- ಒಂದು ಕರ್ಜೂರದಲ್ಲಿ ಪೋಟ್ಯಾಶಿಯಂ (696 ಮಿ.ಗ್ರಾಂ), ಮೆಗ್ನೀಷಿಯಂ (54 ಮಿ.ಗ್ರಾಂ), ವಿಟಮಿನ್ ಬಿ ( 6-0.2 ಮಿ.ಗ್ರಾ), ಫೈಬರ್ (6.7 ಮಿ.ಗ್ರಾಂ), ಮ್ಯಾಂಗನೀಸ್ (0.3 ಮಿ.ಗ್ರಾಂ), ತಾಮ್ರ (0.4 ಮಿ.ಗ್ರಾಂ) ಇರುತ್ತದೆ. ಇದು ನೈಸರ್ಗಿಕವಾಗಿ ಸಿಹಿಯಂಶ ಹೊಂದಿರುವುದರಿಂದ ಕರ್ಜೂರ ತಿಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಸತತ ಒಂದು ವಾರಗಳ ಕಾಲ ಪ್ರತಿದಿನ ಮೂರು ಕರ್ಜೂರ ತಿನ್ನುವುದರಿಂದ ಮೂಳೆಗಳು ಬಲ ಪಡೆಯುತ್ತವೆ.ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ದೇಹಕ್ಕೆ ಶಕ್ತಿ ನೀಡುತ್ತದೆ. ಫೈಬರ್ ಅಂಶವಿರುವುದರಿಂದ ದಿನವಿಡಿ ಉತ್ಸಾಹದಿಂದಿರಲು ನೆರವಾಗುತ್ತದೆ. ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಕರ್ಜೂರ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ನಿಯಮಿತವಾಗಿ ಇದನ್ನು ತಿನ್ನುವುದರಿಂದ ಅಜೀರ್ಣ ಕಾಡುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಾಡುವುದಿಲ್ಲ.
ನೀವು ಕೂಡ ಈ ಮಾಹಿತಿಯನ್ನು ತಿಳಿದುಕೊಂಡು ಇತರರಿಗೂ ಕೂಡ ಷೇರ್ ಮಾಡಿ ಹಾಗೆ ಕರ್ಜೂರ ಹಣ್ಣನ್ನು ತಿನ್ನುವುದನ್ನು ಮರೆಯಬೇಡಿ
Comments